ಶಾಶ್ವತ (ದೈವೀಕ) ಸಂತಸದ ಹಾದಿಯಲ್ಲಿ: ಆಧುನಿಕ ಜೀವನದಲ್ಲಿ ದೈವಿಕ ತತ್ವಗಳ ಅಳವಡಿಕೆ
ನಮ್ಮ ವೇಗದ ಆಧುನಿಕ ಜಗತ್ತಿನಲ್ಲಿ ಶಾಶ್ವತವಾದ ಅಂದರೆ ದೈವೀಕ ಸಂತೋಷವನ್ನು ಕಾಣುವುದು ಒಂದು ಕಷ್ಟಸಾಧ್ಯ ಕಾರ್ಯದಂತೆ ತೋರುತ್ತದೆ. ಆದರೆ, ನಮ್ಮ ಧರ್ಮಗ್ರಂಥಗಳು ಮತ್ತು ನಮ್ಮ ಸಮಕಾಲೀನ ಅನುಭವಗಳು ಒಂದು ಆಳವಾದ ಸತ್ಯವನ್ನು ಬೆಳಕಿಗೆ ತರುತ್ತವೆ: ದೈವಿಕ ವಾಸ್ತವತೆಗೆ ನಾವು ಹತ್ತಿರವಾಗಿದ್ದಂತೆ ನಮ್ಮ ಒಳಗಣ ಆನಂದವು ಸ್ವಯಂಪ್ರಭೆಯಂತೆ ಹೆಚ್ಚಾಗುತ್ತದೆ, ಆ ವಾಸ್ತವತೆಯಿಂದ ದೂರವಾಗಿದ್ದಂತೆ ಯಾತನೆಯ ಜೀವನ ನಮ್ಮನ್ನು ಕುಂದಿಸುತ್ತದೆ.

ದೈನಂದಿನ ಜೀವನದಲ್ಲಿ ಪ್ರಬಲವಾದ ಮತ್ತು ಸರಳವಾದ ಉದಾಹರಣೆ ಕೊಡಬೇಕೆಂದಾದರೆ, ಧ್ಯಾನವನ್ನು ಅಭ್ಯಾಸ ಮಾಡುವುದು. ವ್ಯಸ್ತವಾದ ದಿನಚರಿಯಲ್ಲಿ, ಧ್ಯಾನಕ್ಕೆ ಸ್ವಲ್ಪ ಸಮಯವನ್ನು ಮೀಸಲಿಡುವುದು ಒಂದು ಸಣ್ಣ ಕೆಲಸದಂತೆ ತೋರಬಹುದು. ಆದರೆ ಇದು ಆಂತರಿಕ ಶಾಂತಿಯೊಂದಿಗೆ ಹೊಂದಿಕೆಯಾಗುವ ಶ್ರೇಷ್ಠ ಮಾರ್ಗವಲ್ಲವಾಗುತ್ತದೆ – ಶಾಂತತೆ ಮತ್ತು ಆತ್ಮಜ್ಞಾನ ಎಂಬ ದೈವೀಕ ತತ್ತ್ವಗಳೊಂದಿಗೆ ಸಮ್ಮಿಲನಗೊಳ್ಳುತ್ತದೆ. ನಾವು ಧ್ಯಾನ ಮಾಡುವಾಗ, ಮನಸ್ಸಿನ ಅಸಂಖ್ಯಾತ ವಿಕಲ್ಪಗಳನ್ನು ತೊಡೆದು ಹಾಕುತ್ತೇವೆ, ನಮ್ಮ ನೈಜ-ಸ್ವಭಾವದೊಂದಿಗೆ ಮತ್ತೆ ಸಂಪರ್ಕ ಸಾಧಿಸುತ್ತೇವೆ, ಮತ್ತು ಆಳವಾದ, ಶಾಶ್ವತ ದೈವೀಕ ಅನುಭವವನ್ನು ಹೊಂದುತ್ತೇವೆ. ಈ ಸಂತೋಷದ ಅನುಭವವು ತಾತ್ಕಾಲಿಕವಲ್ಲ, ಅದು ನಮ್ಮ ವಾಸ್ತವತೆಯ ಮತ್ತು ಶಾಂತಿಯ ಸ್ವಾಭಾವಿಕ ಗುಣಗಳೊಂದಿಗೆ ಕೂಡಿ ಅನಾದಿಯಾಗಿಸುತ್ತದೆ.
ವಿಪರೀತವಾಗಿ, ನಾವು ಕೋಪ ಅಥವಾ ದ್ವೇಷದ ಹಿಡಿತದಲ್ಲಿದ್ದಾಗ ನಮಗೆ ಹೇಗನಿಸುತ್ತದೆ ಎಂಬುದರ ಕುರಿತು ಯೋಚಿಸಿ. ಸಹೋದ್ಯೋಗಿ ಅಥವಾ ಸ್ನೇಹಿತನೊಂದಿಗೆವಾದ ವಾಗ್ವಾದವನ್ನು ಕಲ್ಪಿಸಿಕೊಳ್ಳಿ. ಆ ಕ್ಷಣದಲ್ಲಿ ಕೋಪವು ಸರ್ವಥಾ ಸಮಂಜಸವೆನಿಸಬಹುದು, ಆದರೆ ಅದು ಬೇಗನೆ ನಮ್ಮನ್ನು ಅಸ್ಥಿರಗೊಳಿಸಿ, ಅಶಾಂತಗೊಳಿಸುತ್ತದೆ."
ನಮ್ಮ ಮನಸ್ಸು ಕೆಟ್ಟ ಚಿಂತನೆಗಳಿಂದ ತುಂಬಿದಾಗ, ದೇಹವು ಶಾರೀರಿಕ ಒತ್ತಡವನ್ನು ಅನುಭವಿಸುತ್ತವೆ — ಉದಾಹರಣೆಯೆಂದರೆ ಭುಜಗಳಲ್ಲಿ ಗಟ್ಟಿತನ, ತಲೆನೋವು ಅಥವಾ ಆಯಾಸ ಉಂಟಾಗಬಹುದು. ಇದು ನಮ್ಮ ಆಂತರಿಕ ದೈವಿಕ ಸಾಮರಸ್ಯದಿಂದ ದೂರ ಸರಿಯುತ್ತಿರುವ ಸ್ಪಷ್ಟ ಲಕ್ಷಣವಾಗಿದ್ದು, ಅದರ ಸಹಜ ಪರಿಣಾಮಗಳು - ಅಸಂತೋಷ, ನಿರಾಸೆ, ದುಃಖ ಮತ್ತು ಗೊಂದಲ.
ನಮ್ಮ ಇಂದಿನ ಆಧುನಿಕ ಜೀವನವು ಗೊಂಡಲಗಳಿಂದ ತುಂಬಿದೆ, ಆದರೆ ಅದೇ ಸಂದರ್ಭದಲ್ಲಿ ದೈವಿಕ ತತ್ವಗಳೊಂದಿಗೆ ಹೊಂದಾಣಿಕೆಯಾಗಲು ಸಾಕಷ್ಟು ಅವಕಾಶಗಳನ್ನೂ ಸಹ ನಮಗೆ ಒದಗಿಸುತ್ತದೆ. ನಮಗೆ ಮೆಚ್ಚಿದ ಯಾವುದೇ ಸ್ವಯಂ ಸೇವೆಯ ಕೈಂಕರ್ಯ ತೊಡುವುದಾಗಿರಬಹುದು, ಅಥವಾ ಅನ್ಯೊಬ್ಬರಿಗೊಂದು ಸಹಾಯದ ಕೈ ನೀಡುವುದು ಹೀಗೆ ಕರುಣೆ, ತ್ಯಾಗ, ಸೇವೆ ಮುಂತಾದ ಮೌಲ್ಯಗಳೊಂದಿಗೆ ನಮ್ಮ ಜೀವನವನ್ನು ಹೊಂದಿಸಲು ಸಾಧ್ಯ. ಇಂತಹ ಒಳ್ಳೆಯ ಕಾರ್ಯಗಳು ನಮ್ಮ ಮನಸ್ಸನ್ನು ಎತ್ತರಕ್ಕೇರಿಸುತ್ತದೆ, ಇನ್ನೊಬ್ಬರ ಜೊತೆ ವಿಶೇಷವಾದ ಆಂತರಿಕ ಸಂಬಂಧವನ್ನು ರೂಪಿಸುತ್ತವೆ, ಜಗತ್ತಿನ ಒಳ್ಳೆಯತನವನ್ನು ಅನುಭವಿಸಲು ನಮಗೆ ಸಹಾಯ ಮಾಡುತ್ತದೆ. ಈ ರೀತಿಯ ಕಾರ್ಯಗಳಿಂದ ನಮಗೆ ದೊರೆಯುವ ಆನಂದವು ಕ್ಷಣಿಕವಾದುದಲ್ಲ, ಇದು ದೀರ್ಘಕಾಲದ ತೃಪ್ತಿಯನ್ನು ನೀಡುತ್ತದೆ, ಏಕೆಂದರೆ ಇದು ನಮ್ಮ ಆಂತರಿಕ ತತ್ವಗಳೊಂದಿಗೆ ಹೊಂದಿಕೊಂಡಿರುವ ಆಗಾಧವಾದ ವಾಸ್ತವತೆಯೊಂದಿಗೆ ಅನುಬಂಧವನ್ನು ಹೋಡುವುದಕ್ಕೆ ಅನುಕೂಲ ಮಾಡಿಕೊಡುತ್ತದೆ.
ನಾವು ಭೌತಿಕ ಯಶಸ್ಸು ಅಥವಾ ಹೊರಗಣ ಮಾನ್ಯತೆಯ ಮೇಲೆ ಮಾತ್ರ ಗಮನಹರಿಸಿದಾಗ, ಹೊರಗಿನಿಂದ ಸಾಧನೆಗಳನ್ನು ತೋರಿದರೂ, ಒಳಗಿನಿಂದ ಖಾಲಿತನವನ್ನು ಅನುಭವಿಸುತ್ತೇವೆ. ಹೊಸ ಸಾಧನಗಳ (gadgets) ಅಥವಾ ಸಾಮಾಜಿಕ ಮಾಧ್ಯಮ (social media) ದ ಒಪ್ಪಿಗೆ ಅಥವಾ ಅನುಮೋಡನೆಗಾಗಿ ಹುಡುಕುವ ನಿರಂತರ ಓಟವು ನಮ್ಮ ಆಂತರಿಕ ಶಾಂತಿಯಿಂದ ದೂರವಿಸಿ, ನಿರಂತರ ಅಸಮಾಧಾನದ ಸ್ಥಿತಿಯತ್ತ ಕೊಂಡೊಯ್ಯಬಹುದು.
ವಿಜ್ಞಾನವೂ ಈ ಪ್ರಾಚೀನ ಜ್ಞಾನವನ್ನು ಬೆಂಬಲಿಸುತ್ತದೆ. ಮನೋವೃದ್ಧಿ, ಕೃತಜ್ಞತಾಭಾವ ಮತ್ತು ಪರೋಪಕಾರದಂತಹ ಕಾರ್ಯಗಳು ಮನಸ್ಸನ್ನು ಪರಿಶುದ್ಧಗೊಳಿಸಿ, ಮಾನಸಿಕ ಆರೋಗ್ಯವನ್ನು ನಿಖರವಾಗಿ ಉತ್ತಮಗೊಳಿಸುತ್ತವೆ ಎಂಬುದನ್ನು ಸಂಶೋಧನೆಗಳು ತೋರಿಸಿವೆ. ಈ ಚಿಂತನೆಗಳು ಶಾಶ್ವತ ಆಧ್ಯಾತ್ಮಿಕ ತತ್ತ್ವಗಳಿಂದ ಹೊರಹೊಮ್ಮಿದ್ದು, ದೈನಂದಿನ ಒತ್ತಡವನ್ನು ಕಡಿಮೆಗೊಳಿಸಿ ಸಮಗ್ರ ಸಂತೋಷವನ್ನು ಹೆಚ್ಚಿಸುತ್ತವೆ. ಇದಕ್ಕೆ ವಿರುದ್ದವಾಗಿ, ಕೋಪ ಮತ್ತು ದ್ವೇಷದಂತಹ ನಕಾರಾತ್ಮಕ ಭಾವನೆಗಳಿಗೆ ಸಂಬಂಧಿಸಿದ ಒತ್ತಡ, ವಿಜ್ಞಾನದ ಮೂಲಕವೂ ಸಾಬೀತಾಗಿರುವುದೇನೆಂದರೆ, ನಮ್ಮ ಆಂತರಿಕ ದೈವೀ ಸ್ವಭಾವದೊಂದಿಗೆ ಅಸಮ್ಮತಿಯಲ್ಲಿ ಬದುಕುವುದರಿಂದ ಉಂಟಾಗುವ ಅಸ್ವಸ್ಥತೆಯನ್ನು ಮನಗಾಣಿಸುತ್ತದೆ.
ನೆನಪನಲ್ಲಿಡಬೇಕಾದಂತಹ ದೈವಿಕ ಸಂತೋಷದ ನಿಯಮವೇನೆಂದರೆ, ದೈವೀಕ ತತ್ವಗಳ ಕಡೆಗೆ ಸಾಗಿದಂತೆ ಶಾಶ್ವತ ಶಾಂತಿಯು ದೊರೆಯುತ್ತದೆ, ಆದರೆ ಆ ತತ್ವಗಳಿಂದ ದೂರ ಸರಿದಂತೆ ದುಃಖವು ನಿಮ್ಮನ್ನು ಆವರಿಸುತ್ತದೆ- ದೈವದಿಂದ ದೂರವಾದಂತೆ ದುಃಖವು ಹೆಚ್ಚು ಹೆಚ್ಚಾಗುತ್ತದೆ.
ಸಾವಿರಾರು ವರ್ಷಗಳಿಂದ ವೇದಗಳು, ಉಪನಿಷತ್ತುಗಳು, ಹಾಗೂ ಸನಾತನ ಧರ್ಮದ ಮಾರ್ಗದರ್ಶನವು ನಮಗೆ ತಿಳಿಸುತ್ತಾ ಬಂದಿರುವುದೇನೆಂದರೆ, ನಿಜವಾದ ಸಹಜ ಸಂತೋಷದ ಶಾಶ್ವತ ಮಾರ್ಗವು ದೈವಿಕ ತತ್ತ್ವಗಳೊಂದಿಗೆ ನಮ್ಮ ಜೀವನವನ್ನು ಹೊಂದಿಸಿಕೊಳ್ಳುವುದರಲ್ಲಿ ಇದೆ. ಸಹಜನಿಯಮಗಳಿಗೆ ಬದ್ಧನಾಗಿ ಅವುಗಳಿಗೆ ನಾವು ಪುನಃ-ಸಂಪರ್ಕಗೊಳ್ಳುವುದರಲ್ಲಿ ಮತ್ತು ಅವುಗಳನ್ನು ನಮ್ಮ ಜೀವನದ ನೈತಿಕ ನಿಯಮವಾಗಿ ಅಳವಡಿಸಿಕೊಳ್ಳುವುದರಲ್ಲಿ ಶಾಶ್ವತ ಸಂತೋಷದ ಮೂಲವಿದೆ. ಯೋಗ್ಯ ಮನೋವೃತ್ತಿ, ಕರುಣೆ, ಸರಳತೆ ಅಥವಾ ವೈರಾಗ್ಯವಂತಹ ದೈವತತ್ತ್ವಗಳನ್ನು ನಾವು ಅನುಸರಿಸುತ್ತಾ ಹೋದಾಗ, ಅದು ತಕ್ಷಣದಲ್ಲಿಯೇ ನಮಗೆ ಶಾಂತಿಯನ್ನೂ, ಆಧ್ಯಾತ್ಮದ ಹಾದಿಯಲ್ಲಿ ಶಾಶ್ವತ ಸಂತೋಷವನ್ನೂ ನೀಡುತ್ತದೆ. ಈ ದೈವತತ್ತ್ವಗಳು ಪ್ರಾಚೀನ ತತ್ವಗಳಷ್ಟೇ ಅಲ್ಲ; ಅವು ಇಂದಿನ ಯುಗದಲ್ಲಿಯೂ ವ್ಯಾವಹಾರಿಕ ಜೀವನದ ಮಾರ್ಗದರ್ಶಿಗಳಾಗಿವೆ.
#Mindfulness #InnerPeace #SpiritualWellbeing #Happiness #SelfImprovement #EmotionalIntelligence #PurposeDriven #MentalHealth #PositivePsychology #PersonalGrowth #Compassion #InnerHarmony #StressReduction #Wellbeing #LifeFulfillment #DivinePrinciples #JoyfulLiving #HolisticHealth #MindBodyConnection #Gratitude
Image Courtesy: www.inpiration.org