ಡಿಸೈನರ್ (ವಿನ್ಯಾಸಕ) ದೃಷ್ಟಿಕೋನದಿಂದ ಕಲಾವಿದನ ದೃಷ್ಟಿಕೋನದ ಕಡೆಗಿನ ನನ್ನ ಪಯಣ
ವೃತ್ತಿಪರ ಡಿಸೈನರ್ ಆಗಿರುವ ನಾನು ನನ್ನ ದಿನಗಳ ಹೆಚ್ಚಿನ ಸಮಯವನ್ನೂ ದೃಶ್ಯ ಅನುಭವಗಳನ್ನು ನಿರ್ಮಿಸುವ, ಪ್ರತಿ ಅಂಶವನ್ನು ಶ್ರದ್ಧೆಯಿಂದ ಹೊಂದಿಸಲು ಯೋಚನೆ ಮಾಡುವ ಮೂಲಕ ಕಳೆಯುತ್ತೇನೆ. ವರ್ಷಗಳ ಅಭ್ಯಾಸದಿಂದ, ಡಿಸೈನ್ ನನ್ನ ಸಹಜ ವ್ಯಕ್ತಿತ್ವದ ಭಾಗವಾಗಿಬಿಟ್ಟಿದೆ. ಹೀಗಾಗಿ, ನಾನು ಈ ನಿಲುವನ್ನು ನನ್ನ ಜೀವನಕ್ಕೂ ಅನ್ವಯಿಸಲು ಪ್ರಯತ್ನಿಸಿದೆ. ನಾನು ಗುರಿಗಳನ್ನು ನಿಶ್ಚಯಿಸಿ, ನನ್ನ ದಾರಿಯನ್ನು ವಿವರವಾಗಿ ಯೋಜನೆ ಮಾಡುತ್ತಾ, ಪರಿಪೂರ್ಣ ದೃಷ್ಟಿಕೋನಕ್ಕೆ ಹೊಂದುವ ಜೀವನವನ್ನು ರೂಪಿಸಲು ಹೊರಟೆ.
ಆದರೆ ಜೀವನವನ್ನು, ನಿಧಾನನವಾಗಿ ಅರ್ಥಮಾಡಿಕೊಂಡಂತೆ, ನಮ್ಮ ಯೋಜನೆಗಳನ್ನು ಬದಲಿಸಲು ತನ್ನದೇ ಆದ ಮಾರ್ಗವನ್ನು ಹೊಂದಿದೆ. ನನ್ನ ಎಲ್ಲ ಪ್ರಯತ್ನಗಳಿದ್ದರೂ, ನಾನು ನನ್ನ ದಾರಿಯಲ್ಲಿ ನಿರೀಕ್ಷೆಯಿಲ್ಲದ ತೊಡಕುಗಳನ್ನು ಮತ್ತು ಅಡೆತಡೆಗಳನ್ನು ಎದುರಿಸುತ್ತಿದ್ದೆ. ಇಂತಹ ಅನೇಕ ಸಂದರ್ಭಗಳಲ್ಲಿ, ನಾನು ಉತ್ಪನ್ನ ಮತ್ತು ಅನುಭವಗಳನ್ನು ವಿನ್ಯಾಸಗೊಳಿಸುವಲ್ಲಿ ಪರಿಣಿತಿ ಹೊಂದಿದ್ದರೂ, ಜೀವನದಲ್ಲಿ ಅದೇ ವಿಧಾನವನ್ನು ಬಳಸಲು ಸಾಧ್ಯವಿಲ್ಲ ಎಂಬುದನ್ನು ಮನದಟ್ಟುಮಾಡಿಕೊಂಡೆ. ನನ್ನ ಪ್ರಯಾಣದ ಪ್ರತಿ ಸೂಕ್ಷ್ಮವಾದ ವಿವರವನ್ನು ನಿಯಂತ್ರಣದಲ್ಲಿಡುವ ಅಗತ್ಯವು ಬಲುಕಷ್ಟಕರವಾಗಿತ್ತು ಮತ್ತು ಕೆಲವು ವೇಳೆ, ಜೀವನದ ನಿಜವಾದ ಅರ್ಥದಿಂದ ದೂರವಾಗಿ ಜೀವನದ ಸಾರವನ್ನು ಅನುಭವಿಸಲು ಹೆಣಗಾಡುತ್ತಿದ್ದೆ.

ನಾ ಕಲಿತ ಪಾಠ - ಜೀವನ ನಾವು ವಿನ್ಯಾಸಗೊಳಿಸಬಹುದಾದ ಒಂದು ಯೋಜನೆಯಲ್ಲ. ಅದು ಒಂದು ಪಯಣ, ಒಂದು ಹಾದಿ.
ಡಿಸೈನರ್ ಕಡೆಯಿಂದ ಕಲಾವಿದನ ಕಡೆಗೆ: ದೃಷ್ಟಿಕೋನದ ಬದಲಾವಣೆ
ದಿನಗಳು ಸಾಗಿದಂತೆ, ಜೀವನದ ವಾಸ್ತವತೆಗಳು ತನ್ನನ್ನು ತಾನು ತೆರೆದುಕೊಂಡಂತೆ, ನನಗೆ ನನ್ನ ವೃತ್ತಿಪರ ವಿನ್ಯಾಸದ ರೀತಿಯೇ ನನಗೆ ಹೆಚ್ಚಾದ ಒತ್ತಡವನ್ನು ನೀಡುತ್ತಿದೆ ಎಂದು ಅರಿತುಕೊಂಡೆ. ಪ್ರತಿಯೊಂದು ಹೆಜ್ಜೆಯನ್ನು ನಿಖರವಾಗಿ ಯೋಜಿಸುವ ಬದಲು, ಸ್ವತಂತ್ರತೆಯನ್ನು ಆನಂದಿಸುವ ಮತ್ತು ಹೊಸದನ್ನು ಒಪ್ಪಿಕೊಳ್ಳುವ ಮನೋವೃತ್ತಿಯನ್ನು ತೆಗೆದುಕೊಳ್ಳಬೇಕು ಎಂಬ ಯೋಚನೆ ನನಗೆ ಬಂದಿತು. ಈ ಚಿಂತನೆ ನನ್ನೊಳಗೆ ಒಂದು ಬದಲಾವಣೆಗೆ ಸಾಂಕೇತಿಕವಾಗಿ, ಜೀವನವನ್ನು ಕಲಾವಿದನಂತೆ ಅನುಭವಿಸುವ ಹೊಸ ಮಾರ್ಗವನ್ನು ಪರಿಗಣಿಸಲು ನನ್ನನ್ನು ಪ್ರೇರೇಪಿಸಿತ್ತು. ಪ್ರತಿಯೊಂದು ಕ್ಷಣವನ್ನೂ ವಿನ್ಯಾಸಗೊಳಿಸುವ ಬದಲು, ಅದನ್ನು ಕಲಾವಿದನಂತೆ ಆನಂದಿಸಬಹುದು ಎಂಬ ಅರಿವು ನನ್ನಲ್ಲಿ ಧೃಢವಾಯಿತು
ಕಲಾವಿದನು ಕಠಿಣವಾದ ಯೋಜನೆಗಳನ್ನು ಹೊಂದಿರುವುದಿಲ್ಲ, ಮಿತಿಗಳನ್ನು ಹಾಕಿಕೊಂಡಿರುವುದಿಲ್ಲ; ಅವನು ಎದುರಿಗೆ ಬರುವ ಸಂದರ್ಭಕ್ಕೆ ತಕ್ಕ ಆಯಾಮಗಳೊಂದಿಗೆ ಕೆಲಸಮಾಡುತ್ತಾನೆ, ಬದಲಾಯಿಸುತ್ತಿರುವ ಪರಿಸ್ಥಿತಿಯಲ್ಲಿ ತನ್ನ ಸ್ಪರ್ಶಗಳು ಮತ್ತು ರೂಪಾಂತರಗಳನ್ನು ಹೊಂದಿಸಿಕೊಂಡು, ಅಚ್ಚರಿಯ ಉತ್ಪನ್ನಗಳಲ್ಲಿ ಸೌಂದರ್ಯವನ್ನು ಕಂಡುಹಿಡಿಯುತ್ತಾನೆ. ಅವನು ತಮ್ಮದೇ ದೃಶ್ಯವೊಂದು ಮನದಲ್ಲಿ ಹೊಂದಿದ್ದರೂ, ಆಕಸ್ಮಿಕವಾಗಿ ಬರುವ ಕ್ಷಣಗಳನ್ನು ಅರ್ಥಮಾಡಿಕೊಳ್ಳುತ್ತಾನೆ. ಕಲಾವಿದನಂತೆ ಬದುಕುವುದೆಂದರೆ, ನಮ್ಮ ಇಚ್ಛೆಗೆ ಮಿತಿಗೊಳಿಸದೆ, ಜೀವನವನ್ನು ತನ್ನದೇ ಹಾದಿಯಲ್ಲಿ ಮುಂದುವರೆಯಲು ಅವಕಾಶ ಮಾಡಿಕೊಡುವುದಾಗಿರುತ್ತದೆ.
ಬಿಟ್ಟುಕೊಡುವುದು: ಜೀವನದ ಅನಿರೀಕ್ಷಿತ ಸೌಂದರ್ಯವನ್ನು ಆಸ್ವಾದಿಸುವುದು
ಈ ಕಲಾವಿದನ ನೋಟಕ್ಕೆ ಹೊಂದಿಕೊಂಡಂತೆ, ನಾನು ನಿರೀಕ್ಷೆಗಳ ಭಾರವನ್ನು ಸ್ವಲ್ಪ ಬಿಟ್ಟುಕೊಟ್ಟೆ. ನನ್ನ ಜೀವನದ ಪ್ರತಿ ಅಂಶವನ್ನು ವಿನ್ಯಾಸಗೊಳಿಸುವ ಅವಶ್ಯಕತೆ ಬಿಟ್ಟುಕೊಟ್ಟೆ, ಜೀವನವನ್ನು ಹೊಸ ದೃಷ್ಟಿಯಿಂದ ನೋಡಲು ಅವಕಾಶ ಮಾಡಿಕೊಟ್ಟೆ. ನನ್ನ ದಿನಗಳು ನನ್ನ ಮುಂದೆ ಸ್ವಯಂ ರೂಪಾಂತರಗೊಳ್ಳಲು, ಮತ್ತು ನಾನು ಊಹಿಸಲೂ ಸಾಧ್ಯವಾಗದ ರೀತಿಯಲ್ಲಿ ನಡೆಯಲು ಪ್ರಾರಂಭಿಸಿತ್ತು. ಈ ಪ್ರಕ್ರಿಯೆಯ ಮೂಲಕ, ನಾನು ನಿರೀಕ್ಷಿಸದ ಸುಂದರವನ್ನು ಗುರುತಿಸಲು ಪ್ರಾರಂಭಿಸಿದ್ದೆ - ಅದು ನನಗೆ ನಿಯಮದ ಮಿತಿ ದಾಟಿ ಮುಂದುವರೆಯಲು ಅನುವು ಮಾಡಿಕೊಟ್ಟಿತ್ತು.
ಯಾವಾಗಲೂ ಪರಿಪೂರ್ಣತೆಯ ಹಂಬಲದಲ್ಲಿರುವ ನನ್ನಲ್ಲಿರುವ ವಿನ್ಯಾಸಕಾರನು ಸಹ ಹಿಂದಕ್ಕೆ ಸರಿಯಬೇಕಾಗಿತ್ತು. ವಿನ್ಯಾಸದಲ್ಲಿ, ಪರಿಪೂರ್ಣತೆ ಒಂದು ಅಭ್ಯಾಸವಾಗಿದೆ. ಆದರೆ ಜೀವನದಲ್ಲಿ, ನಾನು ಕಲಿತದ್ದು ಎಂದರೆ ಪರಿಪೂರ್ಣತೆಯ ನಿರೀಕ್ಷೆ ನಮ್ಮನ್ನು ತಡೆಯುತ್ತದೆ. ದೋಷಗಳೊಂದಿಗೆ ಮುಂದುವರೆಯುವುದು ಮುಖ್ಯ ಪಾಠವಾಯಿತು. ಜೀವನವು ದೋಷರಹಿತವಾದಗ ಮಾತ್ರ ಅರ್ಥಪೂರ್ಣವಾಗುತ್ತದೆ ಎಂಬುದು ಒಂದು ಸುಳ್ಳು ನಂಬಿಕೆ ಅರಿವಿಗೆ ಬಂದಿತು, ದೋಷಗಳನ್ನು ಅರ್ಥಮಾಡಿಕೊಳ್ಳುವುದೇ ನನ್ನ ಬೆಳವಣಿಗೆಗೆ ಪ್ರಮುಖವಾಗಿರುತ್ತದೆ.
ವಿನ್ಯಾಸಕ ಅಥವಾ ಕಲಾವಿದ: ಸಮಯ, ಸ್ಥಳ, ಮತ್ತು ಆಧ್ಯಾತ್ಮಿಕ ಬೆಳವಣಿಗೆಯ ಸಮತೋಲನ
ಈ ಪಯಣದಲ್ಲಿ ನಾನು ಅರಿತ ಸಂಗತಿ ಎಂದರೆ ವಿನ್ಯಾಸಕರ ಪ್ರಪಂಚವು ಕಾಲ ಮತ್ತು ಸ್ಥಳದಿಂದ ನಿರ್ಬಂಧಿತವಾಗಿರುತ್ತದೆ. ಪ್ರತಿಯೊಂದು ವಿನ್ಯಾಸವೂ ಕಾಲ ಮತ್ತು ದೇಶಕ್ಕೆ ನಿರ್ಬಂಧಿತವಾಗಿರುತ್ತದೆ. ನಾವು ಈ ಮಿತಿಗಳೊಳಗೆ ಕಾರ್ಯನಿರ್ವಹಿಸುತ್ತಿರುತ್ತೇವೆ. ಆದರೆ ಕಲಾವಿದ? ಅವನು ಕಾಲ ಅಥವಾ ದೇಶದ ಮಿತಿಯಿಲ್ಲದೆ ಸೃಷ್ಟಿಸುತ್ತಾನೆ, ಜೀವನದ ಸ್ವರೂಪವನ್ನು ಪ್ರತಿಬಿಂಬಿಸುವಂತೆ. ಆಧ್ಯಾತ್ಮಿಕ ಪಯಣದಲ್ಲಿ ಈ ವ್ಯತ್ಯಾಸ ಬಹುಮುಖ್ಯವಾಗಿದೆ - ನಮ್ಮ ದೃಷ್ಟಿಗೆ ಅಥವಾ ಸ್ಪರ್ಶಕ್ಕೆ ಬರದೆ ಇರುವುದರ ಹತ್ತಿರಕ್ಕೆ ಹೋಗುವುದು, ಜೀವನದ ಅರ್ಥವನ್ನು ಅಪಾರವಾಗಿ ಅನುಭವಿಸುವುದು.
ಸಮತೋಲನ - ದೇಶ ಮತ್ತು ಕಾಲದ ಮಿತಿಯೊಳಗೆ ವಿನ್ಯಾಸಗೊಳಿಸಿದ್ದರೂ, ಅದರ ಭಾವ ಕಾಲ ಮತ್ತು ದೇಶವನ್ನು ಮೀರಿ ಅಭಿವ್ಯಕ್ತಗೊಳಿಸಬೇಕಾಗುತ್ತದೆ. ಈ ಅರಿವು ನನ್ನ ಗುರಿಗಳನ್ನು ನಿಗದಿಪಡಿಸಿಕೊಂಡಿದ್ದರೂ, ಆದರೆ ಅದನ್ನು ಬಿಟ್ಟುಕೊಟ್ಟು, ಹೊಸ ದೃಷ್ಟಿಕೋಣದಿಂದ ನೋಡಿ, ದೊಡ್ಡ ಚಿತ್ರವನ್ನು ಅರ್ಥಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟು ಅದರಂತೆ ನಮ್ಮದೆ ದೋಷಪೂರಿತ ಜೀವನದ ಸಾರ್ಥಕತೆಯನ್ನು ಅನ್ವೇಷಣೆ ಮಾಡಬೇಕಾಗುತ್ತದೆ.
ಕೊನೆಯ ಮಾತು: ಜೀವನದ ಹರಿವಿನ ಸೌಂದರ್ಯವನ್ನು ಒಪ್ಪಿಕೊಳ್ಳುವುದು ಮತ್ತು ಆಸ್ವಾದಿಸುವುದು
ನಿಯಂತ್ರಣ ಮತ್ತು ನಿಖರತೆಯನ್ನು ಮೌಲ್ಯೀಕರಿಸುವ ನನ್ನಂತೆ ಯಾರಾದರೂ ಕಲಾವಿದನ ಪಾತ್ರವನ್ನು ಅಳವಡಿಸಿಕೊಳ್ಳುವುದು ಸವಾಲಾದರೂ ಕೂಡ ಮುಕ್ತ ಭಾವನೆ ತರುತ್ತದೆ. ಬಿಟ್ಟುಕೊಡುವುದು ಎಂದರೆ ದಿಕ್ಕು ಕಳೆದುಕೊಳ್ಳುವುದು ಎಂದಾರ್ಥವಲ್ಲ, ಆದರೆ ಸ್ವಾತಂತ್ರ್ಯವನ್ನು ಹೊಂದುವುದು ಎಂಬುದನ್ನು ನನಗೆ ಮನಸ್ಸಿನಲ್ಲಿ ಜಾರಿಗೆ ತರಲು ಕೆಲ ಕಾಲ ಹಿಡಿಯಿತು.
ವಿನ್ಯಾಸಕರಿಂದ ಕಲಾವಿದನಂತೆ ದೂಷತಿಕೊನ ಬದಲಾವಣೆ ನನ್ನ ಆಧ್ಯಾತ್ಮಿಕ ಪಯಣವನ್ನು ಸಮೃದ್ಧಗೊಳಿಸಿದೆ, ಮತ್ತು ಅದರ ದೋಷಗಳೊಂದಿಗೆ ಜೀವನವನ್ನು ಮುಂದುವರೆಸಿದ್ದೇನೆ.
ಇದೀಗ, ನಿಮ್ಮನ್ನು ಆತ್ಮಪರಿಶೀಲನೆಗೆ ಆಹ್ವಾನಿಸುತ್ತೇನೆ: ನಿಮ್ಮ ಜೀವನದಲ್ಲಿ ಹಾದಿಯಲ್ಲಿಯೂ ಇಂತಹ ಅಂಶಗಳು ಇದೆಯೆ, ಒಂದು ಕಲಾವಿದನ ದೃಷ್ಟಿಕೋನವು ಹೆಚ್ಚು ಸಂತೋಷ ಮತ್ತು ಶಾಂತಿಯನ್ನು ತರುವ ಬದಲಾವಣೆ ತರಬಹುದೇ? ಹೇಳಿ!
ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.
#ಆಧ್ಯಾತ್ಮಿಕಪ್ರಯಾಣ #ಜೀವನಆಯ್ಕೆ #ಬಿಡುಗಡೆ #ಮನನಶೀಲಜೀವನ #ಅಪೂರ್ಣತೆಯನ್ನುಆಲಿಂಗಿಸು #ಡಿಸೈನರ್Vsಕಲಾವಿದ #ಆಂತರಿಕವಿಕಾಸ #ಸೃಜನಾತ್ಮಕಜೀವನ #ಜೀವನದಹರಿವು #ವೈಯಕ್ತಿಕಪರಿವರ್ತನೆ #ಸ್ವಪರಿಚಯ #ಈಕ್ಷಣ