ಪ್ರತಿ ಕ್ರಿಯೆಗೆ ಪ್ರತಿಕ್ರಿಯೆ ಇದ್ದೇ ಇರುತ್ತದೆ—ಆದರೆ ಅದು ನಮ್ಮ ಮನವನ್ನು ಒತ್ತಡಕ್ಕೆ ದೂಡಬೇಕೆ?

ನಮಗೆ ಎಷ್ಟೋ ಸಲ ಜೀವನದಲ್ಲಿ, "ನನ್ನ ನೋವು ಮತ್ತು ದುಃಖಕ್ಕೆ ಹೊರಗಿನ ಜಗತ್ತೇ ಕಾರಣ" ಎಂದು ಅನಿಸುತ್ತದೆ ಅಲ್ಲವೇ?. ಇದರಿಂದ ಹೊರಗಿನ ಪ್ರಪಂಚವನ್ನು ಮತ್ತು ಇತರರನ್ನು ದೂಷಿಸುತ್ತಿರುತ್ತೇವೆ. ಆದರೆ ನಿಜಕ್ಕೂ ಅದು ಸತ್ಯವೇ?

ನ್ಯೂಟನ್‌ನ ಮೂರನೇ ನಿಯಮದ , ಅನುಸಾರ ಏನಾದರೂ ಸೂಚನೆ ಸಿಗುತ್ತದೆಯೋ ಎಂದು ಯೋಚಿಸೋಣ::
"ಪ್ರತಿಯೊಂದು ಕ್ರಿಯೆಗೆ ಸಮಾನ ಮತ್ತು ವಿರುದ್ಧ ಪ್ರತಿಕ್ರಿಯೆ ಇರುತ್ತದೆ."

Newton's Third Law: A New Perspective on Mind and Reactions

ನ್ಯೂಟನ್ ಈ ನಿಯಮವನ್ನು ಭೌತಶಾಸ್ತ್ರದ ದೃಷ್ಟಿಯಿಂದ ಹೇಳಿದ್ದರೂ ಕೂಡ, ಇದನ್ನುನಮ್ಮ ನಮ್ಮ ಮನಸ್ಸಿನ ಮೇಲೆ ಹೇಗೆ ಅನ್ವಯಿಸಬಹುದು. ಎಂದು ತಿಳಿಯಲು ಪ್ರಯತ್ನಿಸೋಣ. ಪ್ರತಿ ಹೊರಗಿನ ಘಟನೆಗೆ, ನಮ್ಮ ಮನಸ್ಸು ಸಮಾನ ಅಥವಾ ಕೆಲವೊಮ್ಮೆ ಅದಕ್ಕಿಂತ ಪ್ರಬಲವಾಗಿ ಪ್ರತಿಕ್ರಿಯಿಸುತ್ತದೆ. ಈ ನಮ್ಮ ಪ್ರತಿಕ್ರಿಯೆಯೇ ನಮ್ಮೆಲ್ಲ ನೋವಿಗೆ ಕಾರಣವಾಗಬಹುದು.

ಟ್ರಾಫಿಕ್ ಘಟನೆ: ಒಂದು ಸರಳ ಉದಾಹರಣೆ

ನೀವು ಒಂದು ಸಂಜೆ ನಿಮ್ಮ ದೀರ್ಘವಾದ ದಿನದ ಕೆಲಸ ಮುಗಿಸಿದ ನಂತರ, ವಿರಮಿಸಲು ಮನೆಗೆ ಮರಳುತ್ತಿದ್ದೀರಿ. ಆತುರದಲ್ಲಿ ಎಲ್ಲಿಂದಲೋ ಬೈಕ್ ಒಂದು ವೇಗವಾಗಿ ನಿಮ್ಮ ಕಾರಿನ ಹತ್ತಿರವರೆಗೆ ಬಂದು ಹೋಗುತ್ತದೆ. ದುರ್ಘಟನೆ ತಪ್ಪಿಸಲು ನೀವು ವೇಗವಾಗಿ ಬ್ರೇಕ್ ಹಾಕುತ್ತೀರಿ. ಭಯದಿಂದ ಸಿಟ್ಟು ಬರುತ್ತದೆ.

ಘಟನೆಯನ್ನು ನಿಧಾನವಾಗಿ ಮೆಲುಕು ಹಾಕೋಣ.

  • ಹೊರಗಿನ ಘಟನೆ: ಅಜಾಗರೂಕ ಬೈಕ್ ಸವಾರ ವೇಗವಾಗಿ ಅಡ್ಡ ಬರುತ್ತಾನೆ. ಅಪಘಾತ ಸಂಭವಿಸಿಯೇ ಬಿಟ್ಟಿತ್ತೇನೋ ಎನಿಸುವಷ್ಟರಲ್ಲಿ ನಿಮ್ಮ ಕಾರಿನ ಬ್ರೇಕ್ ಒತ್ತಿದ್ದೀರಿ.
  • ನಿಮ್ಮ ಪ್ರತಿಕ್ರಿಯೆ: ಕೋಪ, ತಿರಸ್ಕಾರ, ಅಥವಾ ಭಯ. "ಅವನ ಅಜಾಗರೂಕತೆಯಿಂದ ಏನಾದರೂ ಆಗಿದ್ರೆ?" ಎನ್ನುವ ಯೋಚನೆ ಮನದಲ್ಲಿ ಕೂಡಲೇ ಸುಳಿದಾಡುತ್ತದೆ ಅಲ್ಲವೇ?

ಘಟನೆಯ ನಂತರ ಬೈಕ್ ಸವಾರ ನಿಮಗೆ ಕಾಣಸಿಗದಷ್ಟು ದೂರ ಹೋಗಿಬಿಟ್ಟಿರುತ್ತಾನೆ, ಆದರೆ ಕೋಪ ಮತ್ತು ಚಿಂತನೆಗಳು ನಿಮ್ಮ ಮನಸ್ಸಿನಲ್ಲಿಯೇ ಉಳಿದುಬಿಡುತ್ತದೆ. ನೀವು ಮನೆ ತಲುಪಿದರೂ, ಆ ಘಟನೆ ನಿಮ್ಮನ್ನು ಕಾಡುತ್ತಿರುತ್ತದೆ.

ಇಂತಹ ದಿನನಿತ್ಯದ ಘಟನೆಗಳ ಪರಿಣಾಮ ನಮ್ಮ ಮನಸ್ಸಿಗೆ ಹೆಚ್ಚು ಹೆಚ್ಚು ಕಾಡುತ್ತದೆ ಹೇಗೆ

ಇದೊಂದು ಸರಳ ಉದಾಹರಣೆ. ಇಂತಹ ಘಟನೆಗಳು ಅಥವಾ ದುರ್ಘಟನೆಗಳು ನಮ್ಮ ಜೀವನದಲ್ಲಿ ಕೇವಲ ಕೆಲವೇ ಸೆಕೆಂಡುಗಳಲ್ಲಿ ನಡೆದು ಹೋಗಿಬಿಡುತ್ತದೆ. ಆದರೆ ನಮ್ಮ ಮನಸ್ಸು ಅದರ ಪರಿಣಾಮಗಳನ್ನು ಹಲವು ಗಂಟೆಗಳವರೆಗೆ ಅಥವಾ ದಿನಗಳವರೆಗೆ ಅಥವಾ ವರ್ಷಗಳವರೆಗೆ ಅನುಭವಿಸುತ್ತಿರುತ್ತದೆ.. ಕೆಲವು ಪ್ರಮುಖ ಘಟನೆಗಳ ಧನಾತ್ಮಕ ಅನುಭವಗಳು ನಿಮ್ಮ ದೈಹಿಕ ಆರೋಗ್ಯಕ್ಕೂ ತೊಂದರೆ ಉಂಟುಮಾಡಬಹುದು: ರಕ್ತದೊತ್ತಡ, ಸಕ್ಕರೆ ಖಾಯಿಲೆ, ಅಥವಾ ಹೆಚ್ಚಿನ ಸಮಸ್ಯೆಗಳಿಗೂ ಕಾರಣವಾಗಬಹುದು.

ನಾವು ಗಮನಿಸಿದ ಘಟನೆ ತುಂಬಾ ಸರಳವಾದುದು. ಆದರೆ ನಮ್ಮ ದಿನ ನಿತ್ಯದ ಘಟನೆಗಳು ತೀವ್ರ ಸಂಕೀರ್ಣವಾಗಿರುತ್ತದೆ. ಇಂತಹ ಗಂಭೀರ ಘಟನೆಗಳನ್ನು ಹೇಗೆ ನಿಭಾಯಿಸುವುದು? ಅದಕ್ಕೆ ಪ್ರಮುಖವಾಗಿ ನಾವು ತಕ್ಷಣ ಪ್ರತಿಕ್ರಿಯಿಸುವುದನ್ನು ನಿಲ್ಲಿಸಬೇಕು ಯೋಚನೆಮಾಡಿ ಸ್ಪಂದಿಸಬೇಕು.

ಮನಸ್ಸಿನಲ್ಲಿ ಈ ಯೋಚನೆಗಳ ಚಕ್ರದ ಚಲನೆಯನ್ನು ನಿಲ್ಲಿಸುವುದು ಹೇಗೆ?

ನಮ್ಮ ಮನಸ್ಸು ಇಂತಹ ಯಾವುದೇ ಘಟನೆಗಳ ಬಗ್ಗೆ ತೀವ್ರವಾಗಿ ಪ್ರತಿಕ್ರಿಯಿಸದಂತೆ ನೋಡಿಕೊಳ್ಳೋಣ:

  1. ಸ್ವಲ್ಪ ನಿಂತು ಗಮನಿಸಿ: ಮನಸ್ಸು ಕೋಪಗೊಂಡಾಗ, ಒಂದು ಆಳವಾದ ಉಸಿರಾಟವನ್ನು ತೆಗೆದುಕೊಳ್ಳಿ.
  2. ಯೋಚಿಸಿ ದೃಷ್ಟಿಕೋಣ ಬದಲಿಸಿಕೊಳ್ಳೋಣ: "ಈ ಘಟನೆಯನ್ನು ನಾನು ಬಹಳ ಗಂಭೀರವಾಗಿ ತೆಗೆದುಕೊಳ್ಳಬೇಕೆ?" ಎಂದು ಯೋಚಿಸಿ. ಎಷ್ಟೋ ಸಮಯ ನಮ್ಮ ಆರೋಗ್ಯಕ್ಕಿಂತ ದೊಡ್ಡ ವಿಷಯವಾಗಿರುವುದಿಲ್ಲ.
  3. ಧ್ಯಾನಾಭ್ಯಾಸ (ಮೆಡಿಟೇಷನ್): ಧ್ಯಾನ ಅಭ್ಯಾಸ ಮಾಡುವುದರಿಂದ ಮನಸ್ಸು ನಿಧಾನವಾಗಿ ಶಾಂತವಾಗುತ್ತದೆ ಮತ್ತು ನಿಮ್ಮ ಪ್ರತಿಕ್ರಿಯೆ ನಿಮ್ಮ ನಿಯಂತ್ರಣದಲ್ಲಿರುತ್ತದೆ, ಪ್ರಬಲವಾಗಿರುವುದಿಲ್ಲ.

ಧ್ಯಾನದಿಂದ ಆಗುವ ಪ್ರಬಲ ಬದಲಾವಣೆ

ನಿಮ್ಮ ಪ್ರತಿದಿನದ ಧ್ಯಾನಾಭ್ಯಾಸದಿಂದ:

  • ಸಣ್ಣ ಸಣ್ಣ ಘಟನೆಗಳಿಗೆ ಪ್ರತಿಕ್ರಿಯೆಗಳು ಕಡಿಮೆವಾಗುತ್ತವೆ.
  • ನಮ್ಮ ಮೇಲೆ ತೀವ್ರ ಘಟನೆಗಲಿಂದ ಉಂಟಾಗುವ ಪರಿಣಾಮಗಳು ಕಡಿಮೆ ಆಗುತ್ತವೆ
  • ಸ್ಪಷ್ಟತೆ ಮತ್ತು ಶಾಂತತೆಯೊಂದಿಗೆ ಸವಾಲುಗಳನ್ನು ಎದುರಿಸಬಹುದು.

ಕಾಲ ಕಳೆದಂತೆ, ನಿಮ್ಮ ಮನಸ್ಸು ತಕ್ಷಣ ಪ್ರಬಲ ಪ್ರತಿಕ್ರಿಯೆ ಬಿಟ್ಟು ಸ್ಥಿರ ಪ್ರೇಕ್ಷಕನಂತೆ ಮಾರ್ಪಾಡಾಗುತ್ತದೆ. ಜೀವನದ ಗೊಂದಲಗಳ ಅಬ್ಬರ ನಿಮ್ಮ ಸುತ್ತ ಅನುಭವಕ್ಕೆ ಬರುತ್ತಿದ್ದರೂ, ನೀವು ದೃಢವಾದ ಪರ್ವತದಂತೆ ಗಟ್ಟಿಯಾಗಿ ನಿಲ್ಲಲು ಸಹಾಯ ಮಾಡುತ್ತದೆ.

ಕೊನೆಯ ಚಿಂತನೆ:

ಮುಂದಿನ ಸಲ, ಜೀವನದಲ್ಲಿ ಎಷ್ಟೇ ಸವಾಲುಗಳು ಎದುರಾದರೂ, ಅದು ನಿಮ್ಮ ಶಾಂತಿಯನ್ನು ಕದಡಲು ಬಿಡಬಾರದು. ನೀವು ಯಾವ ರೀತಿ ಪ್ರತಿಕ್ರಿಯೆ ನೀಡುತ್ತೀರಿ ಎನ್ನುವುದರ ಮೇಲೆ ಅದು ನಿರ್ಧರಿತವಾಗುತ್ತದೆ.


ನಾನು ಸಹ ಇಂತಹುದೇ ಪ್ರಯಾಣದಲ್ಲಿದ್ದೇನೆ, ಶ್ರದ್ಧೆಯಿಂದ ಹಂತ ಹಂತವಾಗಿ ಶಾಂತಿಯನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದೀನಿ. ಧ್ಯಾನದಂತಹ ಮಾರ್ಗಗಳು ನನಗೆ ಸಹಾಯಮಾಡಿವೆ. ಹೇಗೆ ಸಹಾಯ ಮಾಡುತ್ತಿವೆ ಎಂಬ ಆಸಕ್ತಿ ಇದೆಯೆ? ನನ್ನನ್ನು ಸಂಪರ್ಕಿಸಬಹುದು—ಮಾತಾಡೋಣ.

#ಜಾಗ್ರತೆ #ಭಾವನಾತ್ಮಕಸಮಾಧಾನ #ನ್ಯೂಟನ್‌ಮೂರನೆಯನಿಯಮ #ಧ್ಯಾನಅಭ್ಯಾಸ #ಆಂತರಿಕಶಾಂತಿ #ವೈಯಕ್ತಿಕವಿಕಾಸ #ಆತ್ಮಜ್ಞಾನ #ತಣಿವುನಿರ್ವಹಣೆ #ಮಾನದಕಾಯಿತುಮಹತ್ವ #ಜಾಗೃತಜೀವನ #ಜೀವನಪಾಠಗಳು #ಸ್ಥೈರ್ಯ #ಪ್ರತಿಕ್ರಿಯಾನಿಯಂತ್ರಣ

ನನ್ನನ್ನು ಸಂಪರ್ಕಿಸಿ!
LinkedIn: www.linkedin.com/in/avyaktah
ವೆಬ್ಸೈಟ್: www.avyaktah.com
ಇಮೇಲ್: connect@avyaktah.com

ನಿಮಗೆ ಇವುಗಳು ಕೂಡ ಇಷ್ಟ ಆಗಬಹುದು...

ನಿಮ್ಮ ಅನಿಸಿಕೆ ಹೇಳಿ

Your email address will not be published. Required fields are marked *

knಕನ್ನಡ
Open chat
1
Hello 👋
Can we help you?