ಚಿಕಿತ್ಸಕ ಸಂಪ್ರದಾಯಗಳು: ಸನಾತನ ಧರ್ಮದ ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಶಕ್ತಿ
ಕಳೆದ ವಾರ ನಾನು ಹರಿದ್ವಾರಕ್ಕೆ ಭೇಟಿ ನೀಡಿದೆ. ಈ ನಗರ ಬಣ್ಣ ಬಣ್ಣ ಗಳಿಂದ, ಸಜೀವ ಮತ್ತು ಆಧ್ಯಾತ್ಮ ನೆಲೆಯಿಂದ ಕೂಡಿದ ಸ್ಥಳ. ಹರಿದ್ವಾರದಲ್ಲಿ ಹರಿಯುವ ಗಂಗಾ ನದಿಯನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ನದಿ ತೀರದಲ್ಲಿ ನಿಂತು, ನಾನು ಭಕ್ತಿಯಿಂದ ಮತ್ತು ಸಂತೋಷದಿಂದ ಆಚರಣೆಗಳನ್ನು ಮಾಡುವ ಅನೇಕ ಜನರನ್ನು ನೋಡತೊಡಗಿದೆ. ಈ ಆಚರಣೆಗಳು ಕೇವಲ ಒಂದು ನಂಬಿಕೆ ಎಂದು ನನಗೆ ಅನ್ನಿಸಲಿಲ್ಲ, ಅವುಗಳು ಜನರ ಜೀವನದಲ್ಲಿ ಶ್ರೇಷ್ಠ ಅನುಭವ ಮತ್ತು ಮಹತ್ತರದೊಂದಿಗೆ ಸಂಬಂಧ ಹೊಂದುವ ಮಾರ್ಗಗಳಾಗಿದೆ ಎಂದು ಭಾಸವಾಯಿತು.

ಸನಾತನ ಧರ್ಮದ ಒಂದು ಆಳವಾದ ತತ್ವವೆಂದರೆ ನಮ್ಮ ಸುತ್ತಲಿನ ಪ್ರಕೃತಿಯನ್ನು ಅನುಭೂತಿಯಿಂದ ಕಾಣುವುದು. ಪರ್ವತಗಳು, ನದಿಗಳು, ಆಕಾಶ, ಅರಣ್ಯಗಳು, ಮತ್ತು ಸಮುದ್ರಗಳನ್ನು ಪವಿತ್ರ ಜೀವಂತ ಅಂಶಗಳೆಂದೇ ಪರಿಗಣಿಸಲಾಗುತ್ತದೆ. ಇದು ನಿಜವೂ ಕೂಡ ಅಲ್ಲವೇ, ಅವು ನಮ್ಮ ಜೀವನದೊಂದಿಗೇ ಅಂತಹ ಅವಿನಾಭಾವ ಸಂಬಂಧ ಹೊಂದಿರುತ್ತದೆ. ಪ್ರತಿದಿನ ನಾವು ಅವುಗಳಿಂದ ಅನುಕೂಲ ಪಡೆಯುತ್ತೇವೆ. ವಿಶೇಷವಾಗಿ ಗಂಗಾ ನದಿಗೆ ಸನಾತನ ಧರ್ಮದ ಅನುಯಾಯಿಗಳಲ್ಲಿ ಅವರು ಎಲ್ಲಿಯೇ ಇದ್ದರೂ, ಹೃದಯದಲ್ಲಿ ವಿಶೇಷ ಭಾವನಾತ್ಮಕ ಬಾಂಧವ್ಯವನ್ನು ಹೊಂದಿರುತ್ತಾರೆ. ಅದು ಕೇವಲ ಒಂದು ನದಿಯಲ್ಲ; ಅದು ಜೀವನ, ನಂಬಿಕೆ, ಮತ್ತು ಆಧ್ಯಾತ್ಮಿಕ ಸಂಬಂಧದ ಮೂಲವಾಗಿದೆ. ಹಿಮಾಲಯ ಪರ್ವತಗಳೂ ಸಹ ಪವಿತ್ರವೆಂದು ಪರಿಗಣಿಸಲ್ಪಡುತ್ತವೆ, ಯಾಕೆಂದರೆ ಅವು ಋಷಿ, ಮುನಿಗಳ ವಾಸಸ್ಥಾನ, ಕರ್ಮಸ್ಥಾನ ಮತ್ತು ಪವಿತ್ರ ಜ್ಞಾನದ ಮೂಲ ಸ್ಥಳವಾಗಿದೆ. ಈ ಪ್ರಕೃತಿಯ ಮೇಲೆ ಇರುವ ಗೌರವ ಆ ಮೂಲಭೂತ ಅಂಶಗಳನ್ನು ಅಳವಡಿಸಿಕೊಂಡು ಮತ್ತು ಗೌರವಿಸುವುದನ್ನು ಈ ಆಚರಣೆಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.
ನಾನು ಹರಿದ್ವಾರದಲ್ಲಿ ಗಮನಿಸಿದ ಮೊದಲ ವಿಷಯವೆಂದರೆ ಗಂಗಾ ಸ್ನಾನ. ಗಂಗಾ ನದಿಯಲ್ಲಿ ಸ್ನಾನ ಮಾಡುವ ಈ ಆಚರಣೆ. ಕುಟುಂಬಗಳು, ಸ್ನೇಹಿತರು, ಮತ್ತು ಇತರರು ಒಟ್ಟಾಗಿ ನದಿ ತೀರದಲ್ಲಿ ಸ್ನಾನ ಮಾಡುತ್ತಾರೆ. ಇದು ಕೇವಲ ದೇಹವನ್ನು ಶುದ್ಧಗೊಳಿಸುವುದಲ್ಲ, ಮನಸ್ಸು ಮತ್ತು ಆಲೋಚನೆಗಳನ್ನೂ ಶುದ್ಧಗೊಳಿಸಿ ಹೊಸ ಹುರುಪಿನ ಪುನರಾರಂಭದ ಅನುಭವವನ್ನು ನೀಡುವುದು. ಈ ಸ್ನಾನವು ಅವರ ಮನಸ್ಸು ಮತ್ತು ಆತ್ಮವನ್ನು ಶುದ್ಧಗೊಳಿಸುವ ಶಕ್ತಿ ಹೊಂದಿದೆ ಎಂಬ ನಂಬಿಕೆ ಜನರಿಗೆ ಇದೆ. ಸ್ನಾನ ಮಾಡಿದ ನಂತರ ಜನರು ಸಂತೋಷವಾಗಿ, ಶಾಂತವಾಗಿ ಕಂಡರು. ಅವರು ಮುಗ್ಧರಂತೆ, ಪ್ರಾರ್ಥಿಸಿದರು, ಮತ್ತು ಒಟ್ಟಾಗಿ ಸಂತೋಷಪಟ್ಟರು. ಈ ಸಾಮೂಹಿಕ ಅನುಭವವು ಮನೋಚಿಕಿತ್ಸಕ ಅನುಭವದಂತಿತ್ತು. ಇದು ಜನರಿಗೆ ಸಮಾಧಾನ, ತಾಳ್ಮೆ, ಮತ್ತು ಚಿಂತೆಗಳನ್ನು ಬಿಟ್ಟು ಮುಂದೆ ಸಾಗಲು ಸಹಾಯ ಮಾಡುತ್ತದೆ.
ಇದರಂತೆ ಮುಂದೆ, ನಾನು ಕುಟುಂಬಗಳು ತಮ್ಮ ಇಹಲೋಕವನ್ನು ತ್ಯಜಿಸಿದ ಆಪ್ತರನ್ನು ಗೌರವಿಸಲು ಮತ್ತು ಅವರಿಗಾಗಿ ವಿಧಿವಿಧಾನಗಳನ್ನು ಆಚರಿಸುವುದನ್ನು ನೋಡಿದೆ. ಈ ವಿಧಿವಿಧಾನಗಳಲ್ಲಿ ಪಿಂಡವನ್ನು ಅರ್ಪಣೆ ಮಾಡಿ ಪ್ರಾರ್ಥನೆ ಮಾಡುತ್ತಿರುವುದನ್ನು ಗಮನಿಸಿದೆ. ಕುಟುಂಬಗಳು ಒಟ್ಟಾಗಿ ಸೇರಿ ತಮ್ಮನ್ನು ಆಗಲಿದೆ ಪ್ರೀತಿಪಾತ್ರರಿಗೆ ಗೌರವ ಸಲ್ಲಿಸುತ್ತಾರೆ. ಇದು ಧಾರ್ಮಿಕ ವಿಧಾನವಾಗಿದ್ದರೂ, ಅದು ಕುಟುಂಬದವರ ದುಃಖವನ್ನು ತಿಳಿಗೊಳಿಸಲು ಸಹಾಯ ಮಾಡುತ್ತದೆ ಎಂದು ನನಗೆ ಅನ್ನಿಸಿತು. ಈ ವಿಧಿವಿಧಾನಗಳು ಅಗಲಿದ ಪ್ರೀತಿಪಾತ್ರರ ಆತ್ಮಕ್ಕೆ ಶಾಂತಿ ಮತ್ತು ಶ್ರೇಯಸ್ಕರ ಕಾರ್ಯ ಮಾಡುತ್ತಿರುವ ಭಾವನೆಯನ್ನು ನೀಡುತ್ತದೆ, ಮತ್ತು ಇದು ಕುಟುಂಬದವರಿಗೆ ಭಾವನಾತ್ಮಕವಾಗಿ ಚಿಕಿತ್ಸಕ ಅನುಭವವನ್ನು ನೀಡುತ್ತದೆ.
ಇದೇ ರೀತಿ ಸನಾತನ ಧರ್ಮದಲ್ಲಿ, ಇತರ ಪದ್ಧತಿಗಳಾದ ಹೊಸ ಮನೆ ಪ್ರವೇಶ (ಗೃಹ ಪ್ರವೇಶ) ಆಚರಣೆಗಳಂತಹ , ಈ ಸಂಪ್ರದಾಯಗಳು ಹೇಗೆ ನಮ್ಮನ್ನು ಆಳವಾಗಿ ದೈವಿಕ ಶಕ್ತಿಯೊಂದಿಗೆ ಸಂಪರ್ಕಿಸುತ್ತವೆ ಎಂಬುದು ಸ್ಪಷ್ಟವಾಗುತ್ತದೆ. ಹೊಸ ಮನೆ ಖರೀದಿಸಿದಾಗ, ಮನೆಯವರು ಅವರ ನೆಂಟರನ್ನು ಮತ್ತು ಸ್ನೇಹಿತರನ್ನು ಆಹ್ವಾನಿಸಿ ದೈವಿಕ ಶಕ್ತಿಯನ್ನು ಪ್ರಥಮವಾಗಿ ಸ್ವಾಗತಿಸಿ ತಾವು ಮನೆ ಪ್ರವೇಶ ಮಾಡುತ್ತಾರೆ. ಈ ಕಾರ್ಯವು ದೈವಿಕ ಶಕ್ತಿ ಮನೆಯಲ್ಲಿನ ನಕಾರಾತ್ಮಕ ಶಕ್ತಿಯನ್ನು ತೆಗೆದು, ಪ್ರಬಲ ಸಕಾರಾತ್ಮಕ ಶಕ್ತಿಗಳಾದ ಶಾಂತಿ, ನೆಮ್ಮದಿಯನ್ನು ತರುತ್ತದೆ ಎಂಬ ನಂಬಿಕೆಯನ್ನು ಪ್ರತಿನಿಧಿಸುತ್ತದೆ.
ಈ ಎಲ್ಲ ಆಚರಣೆಗಳು ಕೇವಲ ಸಂಪ್ರದಾಯಗಳಂತೆ ಕಾಣಬಹುದಾದರೂ, ಅವುಗಳ ಒಳಾರ್ಥ ಹೆಚ್ಚು ಅರ್ಥಪೂರ್ಣವಾಗಿವೆ. ಇವು ಜನರನ್ನು ಒಟ್ಟಿಗೆ ತರುತ್ತವೆ, ಭಾವನೆಗಳನ್ನು ವ್ಯಕ್ತಪಡಿಸಲು ಅವಕಾಶ ನೀಡುತ್ತವೆ, ಮತ್ತು ಶಾಂತಿಯ ಕ್ಷಣಗಳನ್ನು ಸೃಷ್ಟಿಸುತ್ತವೆ. ಗಂಗಾ ಸ್ನಾನ ಮಾಡುವುದು, ಅಗಲಿದ ಪ್ರೀತಿಪಾತ್ರರನ್ನು ಗೌರವಿಸುವುದು, ಅಥವಾ ಗೃಹಪ್ರವೇಶಗಳಂತಹ ಈ ಆಚರಣೆಗಳು ನಮ್ಮನ್ನು ಪ್ರಕೃತಿಯೊಂದಿಗೆ, ಇತರರೊಂದಿಗೆ, ಮತ್ತು ನಮ್ಮ ಅಂತರಾತ್ಮದೊಂದಿಗೆ ಸಂಪರ್ಕಿಸಲು ಸಹಾಯ ಮಾಡುತ್ತವೆ.
#ಸನಾತನಧರ್ಮ #ಆಚರಣೆಗಳು #ಭಾವನಾತ್ಮಕಶಾಂತಿ #ಆಧ್ಯಾತ್ಮ #ಗಂಗಾನದಿ #ಹಿಮಾಲಯ #ಭಾರತೀಯಸಂಸ್ಕೃತಿ #ಜೀವನಪಾಠಗಳು #ಸಾಂಸ್ಕೃತಿಕಪ್ರಜ್ಞೆ
ನನ್ನನ್ನು ಸಂಪರ್ಕಿಸಿ!
ವೆಬ್ಸೈಟ್: www.avyaktah.com
ಇಮೇಲ್: connect@avyaktah.com
ಲಿಂಕ್ಡ್ಇನ್: www.linkedin.com/in/avyaktah
Whatsapp Channel: https://whatsapp.com/channel/0029VawUd5q11ulRBY7ZLm3a