ಸುಲಲಿತ ಜೀವನ ನಡೆಸುವ ಪರಿ: ಜೀವನದ ಅಡಚಣೆಗಳನ್ನು ಸ್ವೀಕರಿಸುವುದರಿಂದ ಆನಂದ

ನಿಮಗೆ ಗಮನಕ್ಕೆ ಬರುವ ಹಾಗೆ, ನಮ್ಮ ಮನಸ್ಸು ನೀರಿನ ತರಹ —ಒಂದು ನದಿಯ ರೀತಿ —ನಿರಂತರವಾಗಿ ಬದಲಾಗುವ ಹರಿವಿನ ಸ್ವಭಾವದಿಂದ ಅದನ್ನು ನಿಯಂತ್ರಿಸಲು ಕಷ್ಟವಾಗುತ್ತದೆ. ಅನೇಕ ತತ್ತ್ವಜ್ಞಾನಿಗಳೂ ಸಹ ಮನಸ್ಸನ್ನು ನದಿಗೆ ಹೋಲಿಸುತ್ತಾರೆ, ಮತ್ತು ನದಿಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅದರ ಕಾರಣ ಸ್ಪಷ್ಟವಾಗುತ್ತದೆ.

ಉದಾಹರಣೆಗೆ, ಒಂದು ನದಿ ತನ್ನ ಮಾರ್ಗದಲ್ಲಿ ಸಣ್ಣ ಕಲ್ಲುಗಳು ಮತ್ತು ಅಡಚಣೆಗಳನ್ನು ಎದುರಿಸಿದಾಗ ಸೊಗಸಾಗಿ ಸುಲಲಿತವಾಗಿ ಹರಿಯುತ್ತದೆ. ಆದರೆ ಕೆಲವು ಕಡೆಗಳಲ್ಲಿ ಅದು ದೊಡ್ಡ ಕಲ್ಲುಗಳು ಮತ್ತು ತೀಕ್ಷ್ಣವಾದ ತಿರುವುಗಳಲ್ಲಿ ಹರಿಯುವಾಗ, ಅದು ಒಂದು ರೀತಿಯ ಘರ್ಷಣೆ ಅಥವಾ ಗೊಂದಲ ಸೃಷ್ಟಿಸುತ್ತದೆ. ನಮ್ಮ ಮನಸ್ಸು ಇದೇ ರೀತಿಯ ವರ್ತನೆ ತೋರಿಸುತ್ತದೆ. ನಾವು ಅಡಚಣೆಗಳನ್ನು ಪ್ರತಿರೋಧಿಸಿದಾಗ ಅದು ಒತ್ತಡವನ್ನೂ ಮತ್ತು ಗೊಂದಲಗಳನ್ನು ಸೃಷ್ಟಿಸುತ್ತದೆ. ಆದರೆ ನಾವು ಅವುಗಳನ್ನು ವಿರೋಧಿಸುವ ಬದಲು ಹಾಗೆಯೇ ಸ್ವೀಕರಿಸಿದಾಗ, ಜೀವನ ಸುಲಲಿತವಾಗಿ ಹರಿಯುತ್ತದೆ.

ಪ್ರತಿಷ್ಠೆ, ಪ್ರತಿರೋಧ ಮತ್ತು ಕಷ್ಟ

ಪ್ರತಿರೋಧ ಸ್ವಯಂ ಪ್ರತಿಷ್ಠೆಗಳನ್ನು ರಕ್ಷಿಸಲು ಪ್ರಯತ್ನಿಸುವ ಒಂದು ತಂತ್ರ. ಅದು ನಮಗೆ ಹೋರಾಡುವಂತೆ, ನಿಯಂತ್ರಿಸುವಂತೆ, ಎಲ್ಲವನ್ನೂ ನಮ್ಮ ಅನುಕೂಲಕ್ಕೆ ತಕ್ಕಂತೆ, ತಹಬದಿಗೆ ತರುವಂತೆ ಸೂಚಿಸುತ್ತದೆ. ಆದರೆ ಈ ಪ್ರತಿರೋಧ ಯಾವಾಗಲೂ ಒತ್ತಡ ಮತ್ತು ನೋವಿನ ಪಾಶದಲ್ಲಿ ಸಿಕ್ಕಿಬೀಳುವಂತೆ ಮಾಡುತ್ತದೆ. ನಾವು ಪ್ರತಿರೋಧಿಸುತ್ತಿದ್ದಷ್ಟೂ, ನಮ್ಮ ಪ್ರತಿಷ್ಠೆಯೂ ಪ್ರಬಲವಾಗುತ್ತಾ, ನಮ್ಮನ್ನು ಮತ್ತಷ್ಟು ನೋವಿಗೆ ತಳ್ಳುತ್ತದೆ. ಆದರೆ ಆಧ್ಯಾತ್ಮಿಕ ಜ್ಞಾನ ಒಂದು ಬೇರೆಯದೇ ಮಾರ್ಗವನ್ನು ಸೂಚಿಸುತ್ತದೆ: ಅದುವೇ ಶರಣಾಗತಿ.

ಶರಣಾಗತಿಯ ಮಹತ್ವ

ಶರಣಾಗತಿ ಎಂದರೆ ಕೈ ಬಿಟ್ಟುಕೂಡುವುದು ಅಥವಾ ದೌರ್ಬಲ್ಯ ಎನ್ನುವ ಅರ್ಥವಲ್ಲ. ಇದರ ಅರ್ಥ, ದೈವತ್ವದ ಮಹಾ ವ್ಯವಸ್ಥೆಯ ಮೇಲೆ ನಂಬಿಕೆ ಇಟ್ಟುಕೊಳ್ಳುವುದು ಮತ್ತು ಜೀವನದ ಯಾವುದೇ ಘಟನೆಗಳನ್ನು ಅವು ಬಂದಂತೆ ಸ್ವೀಕರಿಸುವುದು. ಆಧ್ಯಾತ್ಮಿಕವಾಗಿ, ಇದನ್ನು ನಮಗೆ ದೊರೆತ ಪ್ರಸಾದವಾಗಿ ಕಾಣಬೇಕು —ಒಳ್ಳೆಯದು, ಕೆಟ್ಟದು, ಎಲ್ಲವೂ ದೈವದ ಕೊಡುಗೆ ಎನ್ನುವಂತೆ ಅನುಭವಿಸುವುದು.

ನಾವು ಶರಣಾಗತರಾದಾಗ, ಎಲ್ಲಾ ಹೊರಗಿನ ಘಟನೆಗಳನ್ನೂ, ಜನರನ್ನೂ ನಿಯಂತ್ರಿಸಲು ಪ್ರಯತ್ನ ಪಡುವುದನ್ನು ನಿಲ್ಲಿಸುತ್ತೇವೆ. ನಾವು ಅಹಂಕಾರವನ್ನು ಬಿಡುತ್ತೇವೆ ಮತ್ತು ದೈವದ ಕೃಪೆಯೆಂದು ಸ್ವೀಕರಿಸುತ್ತೇವೆ. ಪತಂಜಲಿ ಯೋಗ ಸೂತ್ರಗಳಲ್ಲಿ ಈಶ್ವರ ಪ್ರಣಿಧಾನ ಎಂಬ ಸಿದ್ಧಾಂತದಲ್ಲಿ ಹೀಗೆ ಹೇಳಲಾಗಿದೆ:

"ದೈವಕ್ಕೆ ಶರಣಾಗತಿಯಾಗುವ ಮೂಲಕ, ಪರಮ ಶಾಂತಿಯನ್ನು ಪಡೆಯುತ್ತೇವೆ."

ನಾವು ಯಾವುದೇ ಕ್ರಿಯೆಯನ್ನು ಸ್ವಯಂ ಮಾಡುವವರಲ್ಲ ಎನ್ನುವ ಭಾವನೆಯನ್ನು ನಮಗೆ ಶರಣಾಗತಿ ತಿಳಿಸಿ ಕೊಡುತ್ತದೆ, ನಾವು ಒಂದು ಮಹತ್ತರವಾದ ವಿಶ್ವದ ದೈವೀಕ ಪ್ರಜ್ಞೆಯ ಭಾಗವಾಗಿದ್ದೇವೆ, ಆ ಪ್ರಜ್ಞೆಯ ಮಾರ್ಗದರ್ಶನದಂತೆ ನಡೆಯುವವರಾಗಿದ್ದೇವೆ.

ನೋವನ್ನು ಬೆಳವಣಿಗೆಯಾಗಿ ಪರಿವರ್ತಿಸುವುದು

ಶರಣಾಗತಿಯ ಮನೋಭಾವದಿಂದ, ನೋವು ಕೂಡ ಬದಲಾಗುತ್ತದೆ. ಮೊದಲು ಭಾರ ಅನ್ನಿಸುತ್ತಿದ್ದುದು ನಂತರ ಕಲಿಯುವ ಮತ್ತು ಬೆಳೆಯುವ ಅವಕಾಶದಂತೆ ಅನುಭವಕ್ಕೆ ಬರುತ್ತದೆ. ನದಿ ನಮಗೆ ಹಿಡಿತ ಬಿಡು ಎಂದು ತಿಳಿಸಿಕೊಡುತ್ತದೆ, ಅದುವೇ ಶಾಂತಿಯನ್ನು ತರಿಸುತ್ತದೆ, ಆದರೆ ಪ್ರತಿರೋಧ ಯಾವಾಗಲೂ ಘರ್ಷಣೆ, ಗೊಂದಲಗಳನ್ನು ಉಂಟುಮಾಡುತ್ತದೆ. ಜೀವನದಲ್ಲಿಯೂ ಹಾಗೆಯೇ. ಪ್ರತಿರೋಧವನ್ನು ನಿಲ್ಲಿಸಿ ಶರಣಾಗತಿಯಾದಾಗ, ನಾವು ಭೌತಿಕ ಜಗತ್ತಿನ ಏಳುಬೀಳಿನಿಂದ ಅತೀತವಾದ ಶಾಂತಿ ಮತ್ತು ಆನಂದವನ್ನು ಕಾಣುತ್ತೇವೆ.

ನಮ್ಮ ಗ್ರಂಥ ಕಥೆಗಳು

ರಾಮಾಯಣದಲ್ಲಿ ಹನುಮಂತನ ಪಾತ್ರ ಶರಣಾಗತಿಯ ಒಂದು ಸುಂದರ ಉದಾಹರಣೆ. ಸೀತೆಯನ್ನು ಹುಡುಕಲು ಸಮುದ್ರವನ್ನು ದಾಟಬೇಕಾದಾಗ, ತನ್ನ ಶಕ್ತಿಯ ಮೇಲಿನ ಅನುಮಾನಗಳನ್ನು ಹೊಂದಿದ್ದವ. ಆದರೆ ರಾಮನ ದೈವೀಕ ಇಚ್ಛಾಶಕ್ತಿಗೆ ಶರಣಾಗತಿಯಾಗುವ ಮೂಲಕ, ಅಸಾಧ್ಯವಾದುದನ್ನು ಸಾಧಿಸಲು ಶಕ್ತಿ ಪಡೆದನು. ಅವನ ನಂಬಿಕೆ ಮತ್ತು ಶರಣಾಗತಿ ಕಷ್ಟಕರ ಕೆಲಸವನ್ನು ದೈವೀ ಸೇವೆಯಾಗಿ ಪರಿವರ್ತಿಸಿತು.

ಹಾಗೆಯೇ ಮಹಾಭಾರತದಲ್ಲಿ, ಶ್ರೀ ಕೃಷ್ಣನಿಗೆ ದ್ರೌಪದಿಯ, ಪೂರ್ಣ ಶರಣಾಗತಿ ಮತ್ತೊಂದು ಉದಾಹರಣೆ. ಅವಳ ಮೇಲಾಗುತ್ತಿದ್ದ ಅವಮಾನದ ಸಮಯದಲ್ಲಿ, ಎಲ್ಲಾ ಪ್ರಯತ್ನಗಳು ವಿಫಲವಾದಾಗ, ಅವಳ ಶರಣಾಗತಿ ದೈವೀಕ ನೆರವನ್ನು ತಂದುಕೊಟ್ಟು, ನಿರಾಶೆಯನ್ನು ಕೃಪೆಯಾಗಿ ಪರಿವರ್ತಿಸಿತು.

ಶರಣಾಗತಿ ಮತ್ತು ನಿಜವಾದ ಸಂತೋಷ

ನಿಜವಾದ ಸಂತೋಷ ಸಾಧನೆಗಳಿಂದ ಅಥವಾ ಆಸ್ತಿ-ಪಾಸ್ತಿ ಗಳಿಸುವುದರಿಂದ ಬರುವುದಲ್ಲ. ಇದು ಆತ್ಮದ ಸಹಜ ಸ್ವಭಾವ. ಉಪನಿಷತ್ತುಗಳು ನಮಗೆ ಇದನ್ನು ನೆನಪಿಸುತ್ತದೆ:

“ಆನಂದವು (ಪರಿಪೂರ್ಣತೆಯ ಸಂತಸ) ಆತ್ಮದ ಸ್ವರೂಪ.” (ತೈತ್ತಿರೀಯ ಉಪನಿಷತ್ತು)

ದೈವಕ್ಕೆ ಶರಣಾಗತಿಯಾದ ಮತ್ತು ಜೀವನವನ್ನು ಪ್ರಸಾದವಾಗಿ ಸ್ವೀಕರಿಸುವ ಮೂಲಕ, ನಾವು ಈ ಆಂತರಿಕ ಆನಂದದೊಂದಿಗೆ ಮತ್ತೆ ಸಂಪರ್ಕ ಹೊಂದುತ್ತೇವೆ. ಶರಣಾಗತಿ ಸ್ವಪ್ರತಿಷ್ಠೆಯ ಭ್ರಮೆಯನ್ನು ನೀಗಿಸುತ್ತದೆ ಮತ್ತು ನಮಗೆ ದೈವದೊಂದಿಗೆ ಸಮ್ಮಿಲನವಾಗಲು ಅನುವು ಮಾಡುತ್ತದೆ.

ಶರಣಾಗತಿಯನ್ನು ಅಭ್ಯಾಸ ಮಾಡುವುದು ಹೇಗೆ

  1. ದೈವೀಕ ವ್ಯವಸ್ಥೆಯ ಮೇಲೆ ನಂಬಿಕೆ ಇಡಿ: ಕಷ್ಟಗಳಿಂದ ಕಲಿತ ಮತ್ತು ಒಳ್ಳೆಯದಕ್ಕೆ ಕಾರಣವಾದ ಸಂದರ್ಭಗಳನ್ನು ನೆನೆಪಿಸಿಕೊಳ್ಳಿ. ಎಲ್ಲವೂ ನಿಮ್ಮ ಒಳ್ಳೆಯದಕ್ಕೇ ಸಂಭವಿಸುತ್ತವೆ ಎಂಬುದರಲ್ಲಿ ನಂಬಿಕೆ ಇಡಿ.
  2. ಕೃತಜ್ಞತಾಭಾವವನ್ನು ಅಭ್ಯಾಸ ಮಾಡಿ: ಕಷ್ಟಕರವಾದ ಅನುಭವಗಳನ್ನೂ ಬೆಳೆಯುವ ಅವಕಾಶಗಳೆಂದು ಪರಿಗಣಿಸಿ. ಕೃತಜ್ಞತೆಯು ಸ್ವೀಕಾರವನ್ನು ಸುಲಭಗೊಳಿಸುತ್ತದೆ.
  3. ದೈವದ ಇಚ್ಛೆಯನ್ನು ಗಮನಿಸಿ, ಧ್ಯಾನಿಸಿ: ಶಾಂತ ಸಮಯದಲ್ಲಿ ದೈವದ ಜ್ಞಾನದ ಬಗ್ಗೆ ಚಿಂತನೆ ಮಾಡಿ. ಇದು ಸ್ವಪ್ರತಿಷ್ಠೆಯ ಹಿಡಿತವನ್ನು ಸಡಿಲಗೊಳಿಸುತ್ತದೆ.
  4. ನಿಮ್ಮ ಪ್ರತೀ ಕಾರ್ಯವನ್ನು ಪ್ರಸಾದಬುದ್ಧಿಯಿಂದ ಅರ್ಪಣೆ ಮಾಡಿ: ಗೀತೆಯ ಕರ್ಮಯೋಗ ಸಿದ್ಧಾಂತದಲ್ಲಿ ಬೋಧಿಸಿರುವಂತೆ, ನಿಮ್ಮ ಪ್ರಯತ್ನಗಳನ್ನು ದೈವೀಕ ಶಕ್ತಿಗೆ ಸಮರ್ಪಿಸಿ.

ಕೊನೆಯ ಮಾತು

ಪ್ರತಿರೋಧ ಸ್ವಪ್ರತಿಷ್ಠೆಯನ್ನು ಪ್ರಬಲಪಡಿಸುತ್ತದೆ, ಒತ್ತಡ ಮತ್ತು ನೋವನ್ನು ಉಂಟುಮಾಡುತ್ತದೆ. ಆದರೆ ಶರಣಾಗತಿ ಈ ಚಕ್ರದಿಂದ ನಮಗೆ ಮುಕ್ತಿಯನ್ನು ನೀಡುತ್ತದೆ. ದೈವಕ್ಕೆ ಶರಣಾಗತರಾಗಿ ಮತ್ತು ಜೀವನವನ್ನು ಪ್ರಸಾದವಾಗಿ ಸ್ವೀಕರಿಸಿದ ಮೂಲಕ, ನಾವು ಒಂದು ಉನ್ನತ ಸಂತೋಷವನ್ನು ತಲುಪಲು ಸಾಧ್ಯವಾಗುತ್ತದೆ. ಇದು ದೌರ್ಬಲ್ಯವಲ್ಲ—ಇದು ಪ್ರಬಲ ಶಕ್ತಿ, ಏಕೆಂದರೆ ಇದು ದೈವದ ಕೃಪೆಯೊಂದಿಗೆ ನಮ್ಮನ್ನು ಸಂಪರ್ಕಗೊಳಿಸುತ್ತದೆ. ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಹೇಳುವಂತೆ:

“ಎಲ್ಲಾ ಬಂಧನಗಳನ್ನು ತ್ಯಜಿಸಿ, ನನಗೆ ಶರಣಾಗತಿಯಾಗು. ನಾನು ನಿನ್ನನ್ನು ಎಲ್ಲಾ ನೋವಿನಿಂದ ಮುಕ್ತಗೊಳಿಸುತ್ತೇನೆ.”

ನಾವು ಈ ಜ್ಞಾನವನ್ನು ಸ್ವೀಕರಿಸಿ, ಪ್ರತಿರೋಧವನ್ನು ಬಿಡೋಣ ಮತ್ತು ನಮ್ಮ ಒಳಗಿನ ಆನಂದವನ್ನು ಮರುಹುಡುಕೋಣ.

ನನ್ನನ್ನು ಸಂಪರ್ಕಿಸಿ!

ವೆಬ್ಸೈಟ್: www.avyaktah.com
ಇಮೇಲ್: connect@avyaktah.com
ಲಿಂಕ್ಡ್ಇನ್: www.linkedin.com/in/avyaktah

#ಮನಸ್ಸಿನಕೇಂದ್ರೀಕರಣ #ಶರಣಾಗತಿ #ಆಧ್ಯಾತ್ಮಿಕಬೆಳವಣಿಗೆ #ಅಹಂಕಾರ #ಪ್ರತಿರೋಧ #ದೈವೀಕೃಪೆ #ಯೋಗಸೂತ್ರಗಳು #ಮನಶ್ಶಾಂತಿ #ಆತ್ಮವಿಕಾಸ #ಸ್ವೀಕಾರ #ಜೀವನಪಾಠಗಳು #ದೈವೀಯಯೋಜನೆ #ಕಾರ್ಮಯೋಗ #ಆಂತರಿಕಶಾಂತಿ #ವೈಯಕ್ತಿಕಪರಿವರ್ತನೆ #ಸಂತೋಷ #ಆಧ್ಯಾತ್ಮಿಕಜ್ಞಾನ #ಆನಂದ #ಉಪನಿಷತ್ತುಗಳು #ರಾಮಾಯಣ #ಮಹಾಭಾರತ #ಪ್ರಸಾದ #ಪ್ರಕ್ರಿಯೆಗೆನಂಬಿಕೆ #ಬಿಡು #ನಿಜವಾದಸಂತೋಷ #ಆಂತರಿಕಪ್ರಯಾಣ

ನಿಮಗೆ ಇವುಗಳು ಕೂಡ ಇಷ್ಟ ಆಗಬಹುದು...

ನಿಮ್ಮ ಅನಿಸಿಕೆ ಹೇಳಿ

Your email address will not be published. Required fields are marked *

knಕನ್ನಡ