ಕಡಿಮೆ ಪ್ರತಿಕ್ರಿಯಿಸುವ ಸೂಕ್ಷ್ಮ ಕಲೆ: ಅದರ ಮೂಲಕ ಶಾಂತ ಜೀವನ

ಭಗವದ್ಗೀತೆಯಲ್ಲಿ, ಶ್ರೀಕೃಷ್ಣರು ಸ್ಥಿತಪ್ರಜ್ಞತೆಯನ್ನು ಸ್ಥಿರ ಪ್ರಜ್ಞೆ ಮತ್ತು ಶಾಂತಿಯ ಸ್ಥಿತಿಯೆಂದು ವಿವರಿಸಿದ್ದಾರೆ. ಎಷ್ಟು ಅಶಾಂತಿ ಇದ್ದರೂ, ಸ್ಥಿತಪ್ರಜ್ಞನು ಸಮಸ್ಥಿತಿಯಲ್ಲಿರುತ್ತಾರೆ. ಮೊದಲಿಗೆ ಇದು ಸಾಧು-ಸಂತರಿಗೆ ಮಾತ್ರ ಸಾಧ್ಯವಾಗುವ ಶ್ರೇಷ್ಠ ಆದರ್ಶದಂತೆ ಕಾಣಬಹುದು. ಆದರೆ ನಿಜವಾಗಿಯೂ, ಇದು ಸರಳ ದಿನನಿತ್ಯ ಅಳವಡಿಸಿಕೊಳ್ಳುವ ಅಭ್ಯಾಸಗಳಿಂದಲೇ ಪ್ರಾರಂಭವಾಗುತ್ತದೆ.

ಮನಸ್ಸಿನ ಪ್ರತಿಷ್ಠೆಯ ಪ್ರಭಾವ

ಕೆಳಗಿನ ಉದಾಹರಣೆ ಗಮನಿಸೋಣ:

  • ನಿಮ್ಮ ಫೋನ್ ರಿಂಗಣಿಸುತ್ತದೆ. ತಕ್ಷಣವೇ ನೀವು ನೋಟಿಫಿಕೇಷನ್ ಚೆಕ್ ಮಾಡಿ ಪ್ರತಿಕ್ರಿಯಿಸುತ್ತೀರಿ, ಯಾವಾಗಲೂ ಕಳುಹಿಸಿದ ವ್ಯಕ್ತಿ ತಕ್ಷಣದ ಪ್ರತಿಕ್ರಿಯೆಯನ್ನು ನಿರೀಕ್ಷೆಯಲ್ಲಿ ಇರದಿದ್ದರೂ ಕೂಡ ನಿಮಗೆ ಹಾಗೆ ಮಾಡಬೇಕು ಎಂದು ಅನಿಸುತ್ತದೆ.

ಇದು ನಮ್ಮ ಪ್ರತಿಷ್ಠೆಯಿಂದ ಕೂಡಿದ ಮನಸ್ಸಿನಿಂದ ಪ್ರೇರೇಪಿತವಾಗಿರುತ್ತದೆ, ತಕ್ಷಣ ಪ್ರತಿಕ್ರಿಯೆಯ ಆಗತ್ಯತೆ ಇರದಿದ್ದರೂ ಸಹ ಇತರರಿಂದ ದೃಢೀಕರಣ ಬಯಸುತ್ತದೆ.

ಮತ್ತೊಂದು ಉದಾಹರಣೆ ಗಮನಿಸೊಣ:

  • ಯಾರಾದರೂ ತಮಾಷೆಯಾಗಿ ಹೇಳಿದ ಮಾತು ಅಥವಾ ಉಪೇಕ್ಷೆಯ ಮುಖಭಾವ ತೋರಿದರೆ, ನೀವು ವಾಗ್ಯುದ್ಧಕ್ಕೆ ಇಳಿದುಬಿಡುತ್ತೀರಿ. ಕೆಲವು ಸಲ ಮುಂದುವರೆದು ಹಠ ತೋರಿಸುತ್ತೀರಿ, ಆದರೆ ಅದನ್ನು ಅಲ್ಲಿಯೇ ಗಮನಿಸದೆ ಬಿಟ್ಟುಕೊಟ್ಟಿದ್ದರೆ ನಿಮ್ಮ ದಿನ ಶಾಂತವಾಗಿ ಸಾಗುತ್ತಿತ್ತು ಅನ್ನಿಸುವುದಿಲ್ಲವೇ?

ಇಂತಹ ಸಣ್ಣ-ಸಣ್ಣ ಕ್ಷಣಗಳಲ್ಲಿ ನಾವು ಮಿತಿಮೀರಿದ ಪ್ರತಿಕ್ರಿಯೆ ತೋರಿಸಿ ನಮ್ಮ ಆಂತರಿಕ ಶಾಂತಿಯನ್ನು ಕಳೆದುಕೊಳ್ಳುತ್ತೇವೆ. ಆದರೆ ಇಂತಹ ಕ್ಷಣಗಳಲ್ಲೇ ಸ್ಥಿತಪ್ರಜ್ಞತೆಯನ್ನು ಅಭ್ಯಾಸ ಮಾಡುವ ಅವಕಾಶಗಳಿವೆ ಎಂಬುದು ನಮ್ಮ ಗಮನಕ್ಕೆ ತಂದುಕೊಳ್ಳಬೇಕು. ಅದು ಅಭ್ಯಾಸ ಮಾಡಿದರೆ ಮುಂದೆ ನಮ್ಮ ಜೀವನದಲ್ಲಿ ಎದುರಿಸಬಹುದಾದ ಸಂಕೀರ್ಣ ಪರಿಸ್ಥಿತಿಗಳಿಗೂ ಇದನ್ನು ಅನ್ವಯಿಸಿಕೊಳ್ಳಬಹುದು.

ಸ್ಥಿತಪ್ರಜ್ಞತೆಯ ಅಭ್ಯಾಸ:

  1. ಸ್ವಲ್ಪ ನಿಂತು ಗಮನಿಸಿ: ನೋಟಿಫಿಕೇಶನ್‌ಗಳಿಗಾಗಲಿ, ವಾದಕ್ಕೆ ಶುರು ಮಾಡುವುದರಲ್ಲಿ, ಅಥವಾ ನಿಮ್ಮ ಮನಸ್ಸಿನ ನಿಮ್ಮದೇ ಯೋಚನೆಗಳಿಗೆ ಪ್ರತಿಕ್ರಿಯಿಸುವುದರಲ್ಲಾಗಲಿ ಮೊದಲು ಕ್ಷಣಕಾಲ ನಿಲ್ಲಿ. ನಿಮ್ಮ ಪ್ರತಿಕ್ರಿಯೆ ಅತ್ಯಗತ್ಯವೋ ಎಂದು ನೀವೇ ಪ್ರಶ್ನಿಸಿಕೊಳ್ಳಿ.
  2. ಪ್ರಜ್ಞಾ ಪೂರ್ವಕ ಭಾಗವಹಿಸುವಿಕೆ: ನಿಮ್ಮ ಸ್ಪಂದನೆಯನ್ನು ನಿರೀಕ್ಷಿಸುವ ಸಂದರ್ಭಗಳಲ್ಲಿ ನಿಮ್ಮನ್ನು ನೀವು ಪರಿಪೂರ್ಣವಾಗಿ ತೊಡಗಿಸಿಕೊಳ್ಳಿ ಮತ್ತು ಅದಕ್ಕೆ ಸರಿಯಾಗಿ ಸ್ಪಂದಿಸಿ ಕೂಡಲೇ ನಿಮ್ಮ ಆಂತರಿಕ ಶಾಂತಿಯ ಕಡೆಗೆ ಮರಳಿ.
  3. ಅಗತ್ಯವಿಲ್ಲದ ಹೋರಾಟಗಳನ್ನು ಬಿಟ್ಟುಕೊಡಿ: ಪ್ರತಿಯೊಂದು ಮಾತು, ಸಂದೇಶ, ಅಥವಾ ಯೋಚನೆಗಳಿಗೆ ನಿಮ್ಮ ಶಕ್ತಿ ಮೀಸಲಾಗಿಡಬೇಕು ಎಂದು ಕಡ್ಡಾಯ ನಿಯಮಗಳೇನೂ ಇಲ್ಲ. ಇವುಗಳನ್ನು ಬಿಟ್ಟು ಕೊಡುತ್ತಾ ಹೋದಂತೆ ನಿಮ್ಮೊಳಗೆ ಶಾಂತಿ ಹೆಚ್ಚಿಸಿಕೊಳ್ಳಬಹುದು.

ಕುರುಕ್ಷೇತ್ರದಿಂದ ಸಂದೇಶ:

ಕುರುಕ್ಷೇತ್ರದ ಯುದ್ಧಭೂಮಿಯ ನಡುವಿನಲ್ಲಿ ಅರ್ಜುನನು ತನ್ನ ಮಿತಿಮೀರಿದ ಭಾವನೆಗಳು ಮತ್ತು ಯೋಚನೆಗಳಿಂದ ಕೂಡಿದ ಸ್ಥಿತಿಯಲ್ಲಿ ಅಜ್ಞಾನದಿಂದ ಕೃಷ್ಣನ ಕಡೆ ನೋಡುತ್ತಾನೆ. ಶ್ರೀಕೃಷ್ಣರ ಬೋಧನೆಗಳು ಅವನಿಗೆ ಮಹತ್ವದ ಮತ್ತು ತನಗೆ ನಿಲುಕದ ಶ್ರೇಷ್ಠ ದೃಷ್ಟಿಕೋಣವನ್ನು ನೀಡಿದವು—ಅದರಿಂದ ಅರ್ಜುನನಿಗೆ ಪ್ರತಿಷ್ಠೆಯ ಮತ್ತು ತಪ್ಪು ಭಾವನೆಗಳ ಭಯ ಬಿಟ್ಟು ಲೋಕಕಲ್ಯಾಣಕ್ಕಾಗಿ ಕಾರ್ಯನಿರ್ವಹಿಸಲು ಪ್ರೇರೇಪಿಸದವು

ನಾವೂ ಕೂಡ ನಮ್ಮ ಜೀವನದಲ್ಲಿ ಸವಾಲುಗಳೆಂಬ ಕದನಗಳನ್ನು ಎದುರಿಸುತ್ತೇವೆ—ನಮ್ಮ ಹೊರಗಿನ ಜಗತ್ತಿನೊಂದಿಗೆ ಮಾತ್ರವಲ್ಲ, ನಮ್ಮ ಆಂತರಿಕ ಭಾವನೆಗಳೊಂದಿಗೆ ಕೂಡ. ಸ್ಥಿತಪ್ರಜ್ಞತೆಯನ್ನು ಅಭ್ಯಾಸ ಮಾಡುವ ಮೂಲಕ, ನಾವು ತತ್ ಕ್ಷಣದ, ಹಿಂದೆ ಮುಂದೆ ಯೋಚಿಸದೆ ನೀಡುವ ಪ್ರತಿಕ್ರಿಯೆಗಳನ್ನು ಮೀರಿ ಶಾಂತಿ ಮತ್ತು ಉದ್ದೇಶಪೂರ್ಣತೆಯೊಂದಿಗೆ ಜೀವನದಲ್ಲಿ ಹೊಂದಿಕೊಳ್ಳುತ್ತೇವೆ.

ಸರಳ ಸತ್ಯ

The journey to Sthitaprajnathe begins with everyday moments. By not reacting to every notification, avoiding unnecessary arguments, and letting go of intrusive thoughts, we take small steps toward aligning with the divine principles of balance and clarity. Please note, sometimes mindful silence might also be right response.

ಶಾಂತಿಯ ಹಾದಿ

ಸ್ಥಿತಪ್ರಜ್ಞತೆಯನ್ನು ಅಭ್ಯಾಸ ಮಾಡುವಾಗ ಪ್ರಾರಂಭದಲ್ಲಿ ನಿಮ್ಮ ಸುತ್ತಮುತ್ತ ಇರುವವರು ಅದರಿಂದ ಅಸಮಾಧಾನ ಅನುಭವಿಸಬಹುದು. ಅವರ ಪ್ರಶ್ನೆಗಳು ಅಥವಾ ನಿಮ್ಮ ಮೌನಕ್ಕೆ ಅಥವಾ ಪ್ರತಿಕ್ರಿಯೆಗಳಿಗೆ ಅವರಿಗೆ ಪ್ರಾರಂಭದಲ್ಲಿ ಗೊಂದಲ ಉಂಟಾಗಬಹುದು. ಆದರೆ ಇದು ನಿಮ್ಮ ಜೀವನಶೈಲಿಯ ಭಾಗವಾಗಿ ಮಾರ್ಪಾಟಾದಂತೆ , ಅದು ಶಾಂತಿಯನ್ನು ತರುತ್ತದೆ—ನಿಮ್ಮೊಳಗೂ ಮತ್ತು ನಿಮ್ಮ ಸುತ್ತ ಮುತ್ತಲಿನ ಸಂಬಂಧಗಳು ಮತ್ತು ವಾತಾವರಣಕ್ಕೂ ಶಾಂತಿಯ ಅನುಭವ ತರುತ್ತದೆ.

ಕಾಲಕ್ರಮೇಣ, ನಿಮ್ಮ ಆಂತರಿಕ ಶಾಂತಿ ಹೊರಗೂ ಕೂಡ ಪಸರಿಸಲು ಆರಂಭವಾಗುತ್ತದೆ ಮತ್ತು ನಿಮ್ಮ ಸುತ್ತಮುತ್ತಲಿನವರಿಗೆ ಹೊಂದಾಣಿಕೆಯ ಎಳೆಯಾಗುತ್ತದೆ.

ಚಿಂತನೆ ಮತ್ತು ಅಭ್ಯಾಸ

ಜೀವನದಲ್ಲಿ ಪ್ರತಿಯೊಂದು ಕ್ಷಣವೂ ನಿಮಗೆ ಒಂದು ಆಯ್ಕೆಯನ್ನು ನೀಡುತ್ತದೆ:

  • ಪ್ರತಿಕ್ರಿಯಿಸಬೇಕೆ ಅಥವಾ ಸಮಸ್ಥಿತಿಯಲ್ಲಿರಬೇಕೆ?
  • ಪ್ರತಿಷ್ಠೆಯನ್ನು ಸಾಧಿಸಬೇಕೆ ಅಥವಾ ಬುದ್ಧಿವಂತಿಕೆಯಿಂದ ಮುಂದೆ ನಡೆಯಬೇಕೆ?

ಸ್ಥಿತಪ್ರಜ್ಞತೆಯನ್ನು ಅಭ್ಯಾಸ ಮಾಡುತ್ತಾ ಸಾಗಿದಂತೆ, ಹೆಚ್ಚಿನ ಸಂದರ್ಭಗಳು ನಿಮ್ಮ ತೊಡಕಿಲ್ಲದೆ ತಾನಾಗಿಯೇ ಸುಧಾರಿಸುತ್ತವೆ ಎಂಬುದನ್ನು ನಿಮ್ಮ ಅನುಭವಕ್ಕೆ ಬರುತ್ತದೆ. ಕಡಿಮೆ ಹೋರಾಟ, ಹೆಚ್ಚು ಶಾಂತಿಯನ್ನು ಅನುಭವಿಸುತ್ತೀರಿ!

ನನ್ನನ್ನು ಸಂಪರ್ಕಿಸಿ!

ವೆಬ್ಸೈಟ್: www.avyaktah.com
ಇಮೇಲ್: connect@avyaktah.com
ಲಿಂಕ್ಡ್ಇನ್: www.linkedin.com/in/avyaktah

#ಮನೋನಿಬಂಧನೆ (#Mindfulness) #ಅಂತರಂಗಶಾಂತಿ (#InnerPeace) #ಸ್ಥಿತಪ್ರಜ್ಞತೆ (#Sthitaprajnathe) #ಭಗವದ್ಗೀತೆಜ್ಞಾನ (#BhagavadGitaWisdom) #ಕಡಿಮೆಪ್ರತಿಕ್ರಿಯಿಸುಹೆಚ್ಚುಜೀವಿಸು (#ReactLessLiveMore) #ಭಾವಾತ್ಮಕಬುದ್ಧಿಮತ್ತೆ (#EmotionalIntelligence) #ವೈಯಕ್ತಿಕವಿಕಾಸ (#PersonalGrowth) #ಆತ್ಮಜ್ಞಾನ (#SelfAwareness) #ಜಾಗೃತಜೀವನ (#MindfulLiving) #ಶಾಂತಮನಸ್ಸು (#CalmMind)

ನಿಮಗೆ ಇವುಗಳು ಕೂಡ ಇಷ್ಟ ಆಗಬಹುದು...

ನಿಮ್ಮ ಅನಿಸಿಕೆ ಹೇಳಿ

Your email address will not be published. Required fields are marked *

knಕನ್ನಡ
Open chat
1
Hello 👋
Can we help you?