🌌 ಸಾಯುವ ಮೊದಲೇ ಸತ್ತುಬಿಡು!

ಇಂದು ಬೆಳಗ್ಗೆ ನನ್ನ ಪೂಜೆ ಮತ್ತು ಮೌನ ಧ್ಯಾನದಲ್ಲಿರುವಾಗ, ನಿಧಾನವಾಗಿ ಒಂದು ಗಾಢವಾದ ಅರಿವು ನನ್ನೊಳಗೆ ತೇಲಿ ಬಂತು: pooja and silent meditation, I stumbled upon a gentle but powerful insight:

ನಾವು ನಮ್ಮ ಸಂಪೂರ್ಣ ಜೀವನವನ್ನು ಅನುಭವಗಳಿಂದ ಸುತ್ತುವರೆದು ಬದುಕುತ್ತಿರುತ್ತೇವೆ — ಬಿಸಿಲಿನ ಶಾಖವಾಗಿರಬಹುದು, ಹೆತ್ತವರ ಮತ್ತು ಸುತ್ತುವರೆದವರ ಪ್ರೀತಿಯಾಗಿರಬಹುದು, ನಮ್ಮದೇ ಉಸಿರಿನ ಹತ್ತಿರದ ಲಯವಾಗಿರಬಹುದು, ಮತ್ತು ಎರಡು ಯೋಚನೆಗಳ ನಡುವಿನ ನಿಶ್ಯಬ್ದವೂ ಸಹ ಆಗಿರಬಹದು.

ಆದರೆ ನಾವು ಎಂದಾದರೂ ಒಂದು ಪ್ರಶ್ನೆಯನ್ನು ಕೇಳುತ್ತೇವೆಯೇ:

ಈ ನಮ್ಮೆಲ್ಲಾ ಅನುಭವಗಳ ಆಚೆ ಅತೀತವಾದುದು ಏನಾದರೂ ಇದೆಯೇ?

ಮತ್ತು ನಾವು ಕೇಳಿದರೂ ಸಹ — ದೇಶ ಮತ್ತು ಕಾಲದ ಮಿತಿಯೊಳಗೆ ಕಾರ್ಯನಿರ್ವಹಿಸಲು ಅತ್ಯಂತ ಸಮರ್ಪಕವಾಗಿ ರೂಪಿಸಲ್ಪಟ್ಟ ನಮ್ಮ ಮನಸ್ಸು, ಕೇವಲ ಮೇಲ್ಮೈಯನ್ನು ಮಾತ್ರ ಅರಿಯಬಹುದು. ಏಕೆಂದರೆ ನಮ್ಮ ಮನಸ್ಸು ಈ ತರನಾದ ಪ್ರಶ್ನೆಗಳನ್ನು ಕುರಿತು ಚಿಂತನ ಮಾಡಲು ರೂಪಿಸಲ್ಪಟ್ಟ ಉಪಕರಣವಂತೂ ಅಲ್ಲ. ಬದಲಿಗೆ ಅದು ನಮ್ಮ ಈ ಪ್ರಪಂಚದ ಆಗುಹೋಗುಗಳಿಗೆ ಒಗ್ಗಿಕೊಳ್ಳಲು ಮತ್ತು ಸುತ್ತ ಮುತ್ತಲಿನ ಅಪಾಯ ಮತ್ತು ಸವಾಲುಗಳಿಂದ ನಮ್ಮನ್ನು ರಕ್ಷಿಸಲು ಹೇಳಿ ಮಾಡಿಸಿದ್ದಾಗಿದೆ.

ವಿಜ್ಞಾನವು ಬಹಳಷ್ಟು ವಿವರಿಸುತ್ತದೆ — ಆದರೆ ಯಾವಾಗಲೂ ಸಮಯ ಮತ್ತು ಸ್ಥಳದ ಮಿತಿಯೊಳಗೆ. ನಮ್ಮ ಇಂದ್ರಿಯಗಳು ಜಗತ್ತನ್ನು ಅರ್ಥೈಸುತ್ತವೆ — ಆದರೆ ಕೇವಲ ನೇರವಾಗಿ ಗ್ರಹಿಸಬಲ್ಲದ್ದನ್ನು ಮಾತ್ರ. ಭಾಷೆ, ನಮ್ಮ ಅತ್ಯಂತ ಹೆಮ್ಮೆಯ ಸಾಧನವೂ ಸಹ, ಈ ಮಿತಿಗಳಿಂದ ಬಂಧಿಸಲ್ಪಟ್ಟಿದೆ.

  • 🧠 ನಮ್ಮ ಮನಸ್ಸು ಅದರದೇ ಮಿತಿಯಿಂದಾಚೆ ದಾಟಲಾರದು
  • 🗣️ ಪದಗಳು ಅನಂತವನ್ನು ಹಿಡಿದಿಡಲು ಅಶಕ್ತ
  • ⏳ ದೇಶ ಮತ್ತು ಕಾಲವು ಈ ಜೀವನದ ತಾತ್ಕಾಲಿಕ ಸಾಧನಗಳು ಮಾತ್ರ

ಆದರೆ ಇಂದು ನನ್ನಲ್ಲಿ ಮೂಡಿದ ಅತ್ಯಂತ ಆಳವಾದ ಅರಿವು ಇದು:

ಎಲ್ಲವೂ ಕರಗಿಹೋಗುತ್ತವೆ. ಈ ದೇಹವು ಮಾಯವಾದಾಗ, ಸಮಯವೂ ಕರಗುತ್ತದೆ. ಸ್ಥಳವೂ ಕರಗುತ್ತದೆ. ಮನಸ್ಸೂ ಕೂಡ ಅಳಿದುಹೋಗುತ್ತದೆ.

ಆದರೆ ಒಂದು ಉಳಿಯುತ್ತದೆ. ಆ ಮೂಕ, ಅರಿವಿನ, ಸಾಕ್ಷಿಯಾಗಿರುವ ಪ್ರಜ್ಞೆ, ಅದು ಯಾವಾಗಲೂ ಇತ್ತು. ಅದನ್ನು ನಿರ್ಮಲ ಚೇತನ ಎಂದು ಕರೆಯಬಹುದು. ವಿಶ್ವಾತ್ಮ ಎಂದು ಕರೆಯಬಹುದು. ದಿವ್ಯ ಚೇತನ ಎಂತಲೂ ಕರೆಯಬಹುದು. ದೇವರು ಎಂದೂ ಅಥವಾ ಸರಳವಾಗಿ — ಇರುವು.

ಮತ್ತು ಬಹುಶಃ — ಕೇವಲ ಬಹುಶಃ — ಮಾನವ ಜೀವನದ ನಿಜವಾದ ಉದ್ದೇಶವೆಂದರೆ, ದೇಹವು ಬೀಳುವ ಮೊದಲೇ ಅದರ ಎಚ್ಚರದ ಅರಿವು ತಂದುಕೊಳ್ಳುವುದು.

ಸಾಯುವ ಮೊದಲೇ ಸಾವನ್ನು ಅನುಭವಿಸುವುದು

ದುಃಖದಿಂದಲ್ಲ, ಭಯದಿಂದಲ್ಲ — ಸ್ವಾತಂತ್ರ್ಯದಿಂದ.

"ನಾನು" ಎಂಬ ಭ್ರಮೆಯನ್ನು ತ್ಯಜಿಸಿ, ಎಲ್ಲವನ್ನೂ ಆವರಿಸಿರುವ, ಎಂದೆಂದಿಗೂ ಇರುವ ಒಂದರಲ್ಲಿ ಒಂದಾಗುವುದು.

🕊️ ಆಗ, ವಿವರಣೆಗಳ ಅಗತ್ಯವಿರುವುದಿಲ್ಲ. ಕೇವಲ ಏನೂ ಇಲ್ಲದ "ಶೂನ್ಯ" ಉಳಿಯತ್ತದೆ.

#ಚೇತನ #ಜಾಗರೂಕತೆ #ಆಧ್ಯಾತ್ಮಿಕ_ಎಚ್ಚರಿಕೆ #ಮನಸ್ಸಿನಾಚೆ #ಸಾಯುವ_ಮೊದಲೇ_ಸತ್ತುಬಿಡು #ಸ್ವಯಂ_ಸಾಕ್ಷಾತ್ಕಾರ #ಒಳಗಿನ_ಪ್ರಯಾಣ #ಕಾಲಾತೀತ_ಜ್ಞಾನ #ಕೃತಜ್ಞತೆ #ದಿವ್ಯ_ರಚನೆ #ಅದ್ವೈತ #ಪ್ರಸ್ತುತಿ #ಪವಿತ್ರ_ನಿಶ್ಚಲತೆ #ಒಳ_ಶಾಂತಿ #ವಿಶ್ವ_ಸತ್ಯ

ನಿಮಗೆ ಇವುಗಳು ಕೂಡ ಇಷ್ಟ ಆಗಬಹುದು...

ನಿಮ್ಮ ಅನಿಸಿಕೆ ಹೇಳಿ

Your email address will not be published. Required fields are marked *

knಕನ್ನಡ