🌳 ಆಲದ ಮರದಿಂದ ಎಲಿವೇಟರ್ ವರೆಗೆ

ಕಳೆದ ವಾರ ತುಂಬಾ ದಿನದ ನಂತರ ಆ ಹಳ್ಳಿಗೆ ಭೇಟಿ ನೀಡುವ ಸಂದರ್ಭ ಒದಗಿ ಬಂತು. ಹಾಗೆಯೇ ತಿರುಗಾಡುತ್ತಾ ಅಲ್ಲೇ ಇದ್ದ ಒಂದು ಆಲದ ಮರದ ಕೆಳಗೆ ಕೂತೆ. ಸ್ವಲ್ಪ ಸಮಯದ ನಂತರ ಅಲ್ಲೇ ಕುಳಿತಿದ್ದ ವಯಸ್ಸಾದ ವ್ಯಕ್ತಿಯೊಬ್ಬರ ಮಾತುಗಳು ಶುರುವಾದವು.

ಅವರು - “ಎಲ್ಲಿಯವರೋ ತಾವು?”
ನಾನು – “ಬೆಂಗಳೂರು”
ಅವರು – “ಇಲ್ಲಿ ಯಾರ ಮನೆಗೆ?”
ನಾನು – “ನನ್ನ ದೊಡ್ಡಪ್ಪನ ಮನೆಗೆ”
ಅವರು – “ಓಹೋ ತುಂಬಾ ದಿನದ ಮೇಲೆ ಬಂದಂತೆ ಕಾಣುತ್ತದೆ”

ಹೀಗೆ ಪ್ರಾರಂಭವಾದ ಮಾತುಗಳು ಹಳ್ಳಿಯ ಗಡಿ ದಾಟಿ ಮಳೆ, ಬೆಳೆ, ಜೀವನ, ರಾಜಕಾರಣ ಎಲ್ಲೆಲ್ಲೂ ಸುತ್ತಾಡತೊಡಗಿದವು. ಎಲ್ಲವೂ ನೈಜ, ನೇರ, ಹೃದಯದಿಂದ ಬಂದಂತಹ ಅನಿಸಿಕೆಗಳು ಭಾವನೆಗಳು. ಆದರೆ, ಇಲ್ಲಿ ಬೆಂಗಳೂರಿಗೆ ಬಂದು ನೋಡಿದಾಗ ಮನುಷ್ಯ ಮನುಷ್ಯರ ನಡುವೆ ಗೋಡೆಗಳು ನಿರ್ಮಾಣವಾದಂತೆ ಅನಿಸುತ್ತದೆ. ನಾವು ಹೋಗುವ ಎಲೆವೇಟರ್‌ ನಲ್ಲಿ, ಕುಳಿತಿರುವ ಬಸ್ಸಿನಲ್ಲಿ ಸುತ್ತಲೂ ಮನುಷ್ಯರೇ ಹತ್ತಿರವಿದ್ದರೂ ನಡುವೆ ಆಳವಾದ ಕಂದರ, ನಿಶಬ್ಧ ಗೋಡೆಗಳು ನಿರ್ಮಿಸಿಕೊಂಡಿದ್ದೇವೆ. ಕೆಲವು ಮನೆಗಳಲ್ಲೂ ಸಂಭಂಧಗಳ ನಡುವೆಯೂ ಈ ತರಹದ ಎತ್ತರದ ಗೋಡೆಗಳನ್ನು ನಿರ್ಮಿಸಿಕೊಂಡು ಬದುಕುತ್ತಿದ್ದೇವೆ. ಇನ್ನು ವಯಕ್ತಿಕ gadget ಗಳು, ಮೊಬೈಲ್ ಗಳು ಈ ಅಂತರವನ್ನು ಮತ್ತೂ ಹೆಚ್ಚಿಸಿವೆ. ನಲ್ಮೆಯ ನಗು ಕರಗುತ್ತಿದೆ ಜಾಣ್ಮೆಯ ತಂತ್ರಜ್ಞಾನ ಜೀವನದ ಅವಿಭಾಜ್ಯ ಅಂಗವಾಗುತ್ತಿದೆ. ಮುಂದೆ ai ಈ ತಂತ್ರಜ್ಞಾನದ ವಿಸ್ತಾರವನ್ನು ಸೇರುತ್ತಿದೆ. ಮನುಷ್ಯನ ಮನಸ್ಸಿನ ನಡುವಿನ ಅಂತರವನ್ನು ಹೆಚ್ಚಿಸುವ ಎಲ್ಲ ಸೂಚನೆಗಳನ್ನು ನೀಡುತ್ತಿವೆ. ಈ ಸೈಬರ್ ಜಗತ್ತಿನ ಬಣ್ಣದಲ್ಲಿ ನಿಜವಾದ ಸಂಬಂಧಗಳ ಸೌಂದರ್ಯ ಕಳೆದು ಹೋಗುವುದೇ? ವಿಶ್ವಾಸದ ಮಾತುಕತೆ, ಪ್ರಾಮಾಣಿಕ ಹಾಸ್ಯ, ಹೃದಯದಿಂದ ಹೃದಯದ ಸಂಪರ್ಕ—ನಶಿಸಿ ಹೋಗುವುದೇ? ಕೆಲವು ಸಲ ಈ ಭಯ ಆವರಿಸುವುದು ಸಹಜ.

rediscover what matters: genuine bonds, honest conversations, and the beauty of being human?


💭 ಇದು ನಾವು ಯೋಚಿಸಬೇಕಾದ ವಿಚಾರ.
ತಂತ್ರಜ್ಞಾನದ ಅಳವಡಿಕೆ ನಮ್ಮ ನಡುವಿನ ಕಂದಕವನ್ನು ಹೆಚ್ಚಿಸಬಾರದು, ಎಚ್ಚರ ವಹಿಸಬೇಕು, ನಮ್ಮ ಎಷ್ಟೋ ಹಳೇ ಛಾಯೆಗಳು, ಹಳೆಯ ಕಲ್ಪನೆಗಳು, ಬೆಸೆದ ಹೃದಯಗಳು ಅನಾವರಣಗೊಂಡಾಗ, ನಿಜವಾದ ಜೀವನವನ್ನು ಅರಿಯಲು ಸಾಧ್ಯ
ತಂತ್ರಜ್ಞಾನ ಬೇಕು, ಆದರೆ ನಮ್ಮ ಸಹಜ ಆಯ್ಕೆ ತಂತ್ರಜ್ಞಾನವಾಗಬಾರದು. ಅಲ್ಲವೇ?
ತಂತ್ರಜ್ಞಾನವನ್ನು ಮಿತಿಯಾಗಿ ಮಿತವಾಗಿ ಬೇಕಾದಾಗ ಮಾತ್ರ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ, ಉಳಿದ ಗರಿಷ್ಟ ಸಮಯದಲ್ಲಿ ಜೀವನವನ್ನು ಅನುಭವಿಸೋಣ.

ನಿಮಗೆ ಇವುಗಳು ಕೂಡ ಇಷ್ಟ ಆಗಬಹುದು...

ನಿಮ್ಮ ಅನಿಸಿಕೆ ಹೇಳಿ

Your email address will not be published. Required fields are marked *

knಕನ್ನಡ