
"ವಿಶ್ವಮೂರ್ತಿರ್ ಮಹಾಮೂರ್ತಿ: ದೀಪ್ತಮೂರ್ತಿರ್ ಅಮೂರ್ತಿಮಾನ್|
ಅನೇಕ ಮೂರ್ತಿರ್ಅವ್ಯಕ್ತಃ ಶತ ಮೂರ್ತಿ ಶತಾನನ:"
- ವಿಷ್ಣು ಸಹಸ್ರ ನಾಮದಲ್ಲಿ ಬರುವ ಒಂದು ಮಂತ್ರ, ಶ್ರೀ ವಿಷ್ಣುವಿನ ಹೆಸರು -
"ಅವ್ಯಕ್ತಃ" ಎನ್ನುವ ಪದ ವಿಷ್ಣುಸಹಸ್ರನಾಮದಲ್ಲಿ ಬರುವ ಶ್ರೀ ಮಹಾ ವಿಷ್ಣುವಿನ ಸಾವಿರದ ಹೆಸರಲ್ಲಿ ಒಂದು ಹೆಸರು. ಇದು ಅಗಾಧ ಮಹತ್ವ ಪಡೆದಿದೆ. ವ್ಯಕ್ತ ಪಡಿಸಲಾಗದ ಅಥವಾ ಅಪ್ರಕಟಿತ, ನಿರಾಕಾರ, ನಿರ್ಗುಣ ಹಾಗೂ ನಮ್ಮ ದೃಷ್ಟಿಗೆ ನಿಲುಕಲಾರದ ಭಾವವನ್ನು ಸಂಕೇತಿಸುತ್ತದೆ. ಈ ದೈವಿಕ ಭಾವದ ತತ್ವ ಮಾನವನ ಚಿಂತನೆಗಾಗಲಿ, ಅರಿವಿಗಾಗಲಿ ಅಥವಾ ಭಾಷೆಗಾಗಲಿ ನಿಲುಕಲಾರದ ಪರಿಕಲ್ಪನೆಯಾಗಿದೆ. ಶ್ರೇಷ್ಠವಾದ ದೈವಿಕ ಸತ್ಯ ಮಾನವನ ಕಲ್ಪನೆಗೆ ನಿಲುಕಲಾರದ್ದು ಎಂಬುದನ್ನು ಪ್ರತಿಪಾದಿಸುತ್ತದೆ.
ಯಾವಾಗಲೂ ನಾನು ಈ ಪ್ರಪಂಚದ ದೈವಿಕವಾದ ಮೂಲ ವಾಸ್ತವದ ಬಗ್ಗೆ ಯೋಚನೆ ಮಾಡಲು ತೊಡಗಿದಾಗಲೂ, ವಾಸ್ತವದ ಆಗಾಧತೆಯ ವಿಸ್ತಾರ ಮತ್ತು ಆಳ ಹರಿವು ನನ್ನನ್ನು ನಿಬ್ಬೆರಗಾಗುವಂತೆ ಮಾಡುತ್ತದೆ. ದಿನ ಕಳೆದಂತೆ ಜೀವನದ ಅನುಭವಗಳು ಮಾಗಿ ಮಡುಗಟ್ಟಿದಾಗ ಈ ವಿಸ್ತಾರ ನಮ್ಮ ಅರಿವಿಗೆ ಬಾರದ್ದು ಅನ್ನುವ ಮನಸ್ಥಿತಿ ಘಟ್ಟಿಯಾಗುತ್ತ ಹೋಗುತ್ತದೆ. ಇಂತಹ ಒಂದು ಹಂತದಲ್ಲಿ ವಿಷ್ಣು ಸಹಸ್ರ ನಾಮದ . ಈ ಪದ ಅವ್ಯಕ್ತಃ ಎನ್ನುವುದು ಈ ಸ್ಥಿತಿಯನ್ನು ಸಾರಾಂಶವಾಗಿ ಹಿಡಿದಿಟ್ಟುಕೊಳ್ಳಲು ಸಹಾಯ ಮಾಡುವ ಪದ ಎಂದು ನನಗೆ ಅನ್ನಿಸಿತು. ಈ ದೈವಿಕ ಮೂಲ ವಾಸ್ತವದ ಒಂದು ತುಣುಕು ನಮ್ಮಲ್ಲಿರುವುದು ಸಹ ಸತ್ಯ. ವಿಸ್ತಾರವಾದ ಸಮುದ್ರದ ಒಂದು ಕಣದಂತೆ ಪ್ರತಿಯೊಬ್ಬ ಜೀವಿಯಲ್ಲಿಯೂ ಈ ದೈವಿಕತೆಯ ಈ ತುಣುಕು ಇದೆ. ಆದ್ದರಿಂದಲೇ ನಾವು ಜೀವಿಸಿದ್ದೇವೆ. ಆ ಕಣ ಆವಿಯಾದರೆ ಈ ದೇಹ ಅಸ್ತಿತ್ವ ಕಳೆದುಕೊಳ್ಳುತ್ತದೆ.
ಹಾಗಾದರೆ ಆ ದೈವೀಕತಯು ಎಲ್ಲೆಲ್ಲಿಯೂ ವಿಸ್ತಾರವಾಗಿ ಹರಡಿಕೊಂಡಿದ್ದೂ, ಹಾಗೂ ನಮ್ಮಲ್ಲಿಯೂ ಅಷ್ಟೇ ಸರ್ವಶಕ್ತನಾಗಿ ಇದೆ ಎಂದಾದರೆ ನಮ್ಮ ಅನುಭವಕ್ಕೆ ಅಷ್ಟು ಸುಲಭವಾಗಿ ಬರುತ್ತಿಲ್ಲವೇಕೆ? ಇದನ್ನು ಅನುಭವಿಸಬೇಕು ಎಂದೂ ಸಹ ನಮ್ಮಲ್ಲನೇಕರಿಗೆ ಅನಿಸುತ್ತಿಲ್ಲವೇಕೆ? ಇದಕ್ಕೆ ನನಗೆ ಅನ್ನಿಸಿದಂತಹ ಉತ್ತರವೇನೆಂದರೆ ವಾಸ್ತವತೆಯ ತುಣುಕಿನ ಸುತ್ತ ಅವರಿಸಿರುವೆ ಲೌಕಿಕ ಸುರಕ್ಷತೆಯ ಈ ದೇಹ, ಇಂದ್ರೀಯಗಳು, ಮನಸ್ಸು . ಈ ದೇಹ ತನ್ನನ್ನು ತಾನು ಕಾಪಾಡಿಕೊಳ್ಳಲು ಅದರದೇ ಆದಂತಹ ವ್ಯವಸ್ಥೆಯನ್ನು ರೂಪಿಸಿಕೊಂಡಿದೆ. ಇದು ಜೀವ ವಿಕಾಸದ ಹಾದಿಯಲ್ಲಿ ಒಂದು ಅವಿಭಾಜ್ಯ ವ್ಯವಸ್ಥೆ. ಜೀವಕ್ಕೆ ತನ್ನನ್ನು ತಾನು ರಕ್ಷಿಸಿಕೊಳ್ಳಲು ಬೇರೆ ಬೇರೆ ಅಂಗಗಳ ಆಸರೆ ಬೇಕು, ಸುತ್ತಲಿನ ಪರಿಸರ ತನ್ನ ಹಿಡಿತದಲ್ಲಿರಿಸಿಕೊಳ್ಳಲು ವಿವಿಧ ಅಂಗಗಳ ಮತ್ತು ಭಾವನೆಗಳ ಆಸರೆ ನಿರಂತರ ಅಭಿವೃದ್ಧಿ ಪಡಿಸಿಕೊಳ್ಳಬೇಕಾಗಿತ್ತು ಮತ್ತು ಅದು ಅನಿವಾರ್ಯವಾಗಿತ್ತು. ಈ ವಿಕಸನದ ಹಾದಿಯಲ್ಲಿ ದೈವೀಕತೆ ದೂರ ಸರಿಯಿತು ಮತ್ತು ಅದರ ಆಸರೆ ಬೇಕಾಗಿಲ್ಲ ಅನ್ನುವಂತಹ ಪರಿಸ್ಥಿತಿಯಾಯಿತು.
ಈಗ ಹೇಗಾಗಿದೆಯೆಂದರೆ, ದೈವಿಕ ವಾಸ್ತವತೆ “ಅವ್ಯಕ್ತಃ” ನಮ್ಮೊಳಗೆ ಇದ್ದರೂ, ಜೀವ ಅದಕ್ಕೆ ದೃಢವಾಗಿ ಗೋಡೆಯ ಹೊರಗೆ ಗೋಡೆಗಳನ್ನು ಕಟ್ಟಿ ಬಂಧಿಯಾಗಿಸಲಾಗಿದೆ. ಈಗ ಮನುಷ್ಯ ಜೀವ ವಿಕಸನದ ಈ ಹಂತದಲ್ಲಿ ತನ್ನ ಮೂಲದ ಅರಿವು ಕಾಣದೆ ಹೆಣಗಾಡುತ್ತಿದ್ದಾನೆ. ಗೋಡೆಗಳ ಸುತ್ತ ಗೋಡೆ ಕಟ್ಟಿರುವುದು ಮರೆತೇ ಹೋಗಿದೆ. ವಾಸ್ತವತೆ ಅನುಭವಕ್ಕೆ ಬರದೇ ಶೂನ್ಯತೆ ಆವರಿಸಿದೆ. ..
ಈ ಶೂನ್ಯತೆಯಲ್ಲಿ ಅಸಹನವಾದ ಬದುಕು ಸಾಕಾಗಿದೆ. ಮೂಲ ವಾಸ್ತವತೆ ಬೇಕು ಅನ್ನಿಸುತ್ತಿದೆ. ನಿಮಗೂ ಹೇಗೆ ಅನ್ನಿಸಿದ್ದರೆ, ಬನ್ನಿ ಈ ಅವ್ಯಕ್ತಃ ಭಾವದ ವಾಸ್ತವತೆಯ ಕಡೆ ಮುಖ ಮಾಡೋಣ. .ಅನುಭವಿಸಲು ಪಣತೊಡೋಣ. ಒಬ್ಬರಿಗೊಬ್ಬರು ಅರ್ಥ ಮಾಡಿಸುತ್ತಾ ಬಂಧಿಯಾಗಿರುವ ಅವ್ಯಕ್ತಃ ವಾಸ್ತವತೆಯನ್ನು ಅನುಭವಿಶೋಣ.
Image Courtesy –
Freepik