ಅರಸುತ್ತಿರುವ ಅನ್ವೇಷಕ

ಹೆಸರು: ಗುರುಪ್ರಸಾದ

ಉದ್ದೇಶ:
ಬುದ್ಧಿಯ ನೆಲೆಯಿಂದ ಹೃದಯದ ಕಡೆಗೆ, ಜ್ಞಾನದಿಂದ ತಿಳುವಳಿಕೆಯ ಕಡೆಗೆ, ಸ್ವದಿಂದ ಬೃಹತ್ ವಿಶ್ವದತ್ತ ಪಯಣ.

ಅನುಭವ

📌 ಜೀವನ ವಿಶ್ಲೇಷಕ (ಜೀವನದ ಮೊದಲ ದಿನಗಳಲ್ಲಿ)

  • ತರ್ಕ, ವಿವರಣೆ ಮತ್ತು ಬುದ್ಧಿವಂತ ಚರ್ಚೆಗಳ ಕಲೆಯನ್ನು ಅರ್ಥಮಾಡಿಕೊಂಡೆ.
  • ಜೀವನದ ಎಲ್ಲ ಸವಾಲಿಗೂ, ವಿಶ್ಲೇಷಣೆ ಮತ್ತು ಜ್ಞಾನದ ಮೂಲಕ ಪರಿಹಾರ ಕಂಡುಹಿಡಿಯಬಹುದು ಎಂದು ನಂಬಿಕೆ ಇಟ್ಟೆ.
  • ಜೀವನದಲ್ಲಿನ ಯಶಸ್ಸನ್ನು ಸಾಧನೆಗಳಲ್ಲಿಯೂ, ಹುದ್ದೆಗಳಲ್ಲಿಯೂ, ಮತ್ತು ಬಾಹ್ಯ ಮಾನ್ಯತೆಗಳ ಮೂಲಕ ಅಳೆಯುತ್ತಿದ್ದೆ.

📌 ವಾಸ್ತವದ ಪರಿಶೀಲಕ (ನಂತರದ ದಿನಗಳಲ್ಲಿ ಮಾರ್ಗ ಬದಲಾವಣೆ)

  • ಬುದ್ದಿಮತ್ತೆ ಒಂದೇ ಎಲ್ಲ ಸಂದರ್ಭಗಳಲ್ಲಿ ಮನಸ್ಸಿಗೆ ಶಾಂತಿ ಮತ್ತು ಸಮಾಧಾನ ನೀಡುವುದಿಲ್ಲವೆಂಬುದನ್ನು ಅರಿತೆ
  • ನಷ್ಟ, ಅಸ್ಪಷ್ಟತೆ ಎದುರಿಸಿದೆ, ಎಲ್ಲವನ್ನೂ ಬುದ್ಧಿ ಮತ್ತು ಚಿಂತನೆಯ ಮೂಲಕ ಪರಿಹರಿಸಲಾಗುವುದಿಲ್ಲ ಎಂಬುದನ್ನು ತಿಳಿದುಕೊಂಡೆ.
  • ಆತ್ಮಸಮರ್ಪಣೆ, ವಿನಮ್ರತೆ ಮತ್ತು ಮೌನದ ಮೌಲ್ಯ ತಿಳಿದುಕೊಂಡೆ.

📌 ಅಂತರಂಗದ ಹರವಿನ ಸಂಶೋಧಕ (ಪ್ರಸ್ತುತ ಪಾತ್ರ)

  • ಜ್ಞಾನ ಸಂಗ್ರಹಣೆಯಸ್ತರದಿಂದ ತಿಳುವಳಿಕೆಯ ಜೀವನಕ್ಕೆ ಪರಿವರ್ತನೆ ಮಾದಿಕೊಳ್ಳಲು ಪ್ರಯತ್ನ ಪಡುತಿದ್ದೇನೆ .
  • ಇತರರ ಮಾತಾಡುವ ಶಬ್ಧಗಳಷ್ಟೇ ಅಲ್ಲದೆ ಮಾತನಾಡದ ಮೌನದ ಹಾಗೂ ಆಳದ ಸತ್ಯಗಳನ್ನೂ ಕೇಳಿಸಿಕೊಳ್ಳುವ ಅಭ್ಯಾಸ ಮಾಡುತ್ತಿದ್ದೇನೆ.
  • ಇರುವ ಇರುವಿನಲ್ಲಿ ಅರ್ಥ ಹುಡುಕಲು ಪ್ರಯತ್ನಿಸುತ್ತಿದ್ದೇನೆ

ಕೌಶಲ್ಯಗಳು

✔️ ಚಿಂತನೆ ಕಮ್ಮಿ ಮಾಡಿ, ಭಾವನೆಗಳಿಗೆ ಒತ್ತು ಕೊಡುವುದು

✔️ ತಿಳಿವು ಕಡಿಮೆ ಮಾಡಿ, ಆಳದ ಅರ್ಥಕ್ಕೆ ಒತ್ತು

✔️ ನಿಯಂತ್ರಣ ಬಿಟ್ಟು, ಪ್ರವಾಹವನ್ನು ಅಪ್ಪಿಕೊಳ್ಳುವುದು

✔️ "ನಾನು" ಎಂಬ ಸಂಕೀರ್ಣ ದೃಷ್ಟಿಯಿಂದ ಆಚೆ, ವಿಶ್ವದ ಸಮಸ್ತದೊಂದಿಗೆ ಸಂಪರ್ಕ ಸಾಧಿಸುವುದು

ಸಾಧನೆ

🏆 ನನಗೆ ಉಪಯುಕ್ತವಾಗದ ತಿಳುವಳಿಕೆಯನ್ನು ಬಿಟ್ಟು ಕಲಿತಿದ್ದನ್ನು ಮರೆಯಲು ಪ್ರಯತ್ನ ಪಡುವುದು

🏆 ಶಾಂತಿ ಮತ್ತು ನಿಶ್ಯಬ್ದ ಆಗಾಧತೆ ಮತ್ತು ಸಂಪರ್ಕದ ಕ್ಷಣಗಳನ್ನು ಅನುಭವಿಸುವುದು

🏆 ಬ್ರಹ್ಮಾಂಡ ನನ್ನಿಂದ ಬೇರೆಯಲ್ಲ, ಅದು ಎಂದೆಂದಿಗೂ ನಾನು ಅದರಲ್ಲೇ ಮನೆ ಮಾಡಿಕೊಂಡಿದ್ದೆ ಎಂದು ಅರಿವು

References

🌿 ಪ್ರಕೃತಿ – ಧೈರ್ಯ ಮತ್ತು ಸಹನೆಯನ್ನು ಕಲಿಸಿತು

🕊️ ಮೌನ – ಪದಗಳಿಂದ ಹೇಳಲಾಗದ ಸತ್ಯವನ್ನು ತೋರಿಸಿತು

💙 ಮನಸ್ಸು ವಿಚಲಿತವಾಗಿದ್ದರೂ, ಸ್ಪಷ್ಟತೆಯಿಂದ ಕೂಡಿರುವ ಹೃದಯ

ಪ್ರಸ್ತುತ ಸ್ಥಿತಿ: ಅನಂತ ಸಾಧ್ಯತೆಗಳಿಗೆ ತೆರೆದುಕೊಂಡು, ನಿರಂತರವಾಗಿ ರೂಪಾಂತರಗೊಳ್ಳುತ್ತಿರುವವನು

Connect with me-
Whatsapp: 9900503875
ಇ-ಮೇಲ್ : connect@avyaktah.com

knಕನ್ನಡ