ಕಾಣದ ಅಂತರಂಗದ ಪಯಣ

ನನ್ನ ಹೆಸರು ಗುರುಪ್ರಸಾದ್, ಊರು ಬೆಂಗಳೂರು.

ನನ್ನ ಚಿಕ್ಕವಯಸ್ಸಿನಿಂದ ನನಗೆ ಸನಾತನ ಧರ್ಮದ ಆಳವಾದ ಜ್ಞಾನದ ಬಗ್ಗೆ ಕುತೂಹಲ ಮತ್ತು ಅರಿವು ಮೂಡಿತ್ತು. .ಬೆಳೆಯುತ್ತಿದ್ದಂತೆ ಸನಾತನ ಧರ್ಮಗ್ರಂಥಗಳ ಬಗ್ಗೆ ಮತ್ತು ಅದನ್ನು ಅಭ್ಯಾಸ ಮಾಡಿದ ಹಿರಿಯರ ಪ್ರವಚನಗಳಿಂದ ಪ್ರಭಾವಿತನಾಗಿ ಇದರ ಬಗ್ಗೆ ಮತ್ತಷ್ಟು ಮೋಹ ಹೆಚ್ಚಾಯಿತು. ಮುಂದೆ ಜೀವನದ ಹಲವಾರು ಅನುಭವಗಳ ಮೂಲಕ ಕಾಲಾತೀತವಾದ ಈ ಜ್ಞಾನದ ತುಣುಕುಗಳನ್ನು ಮತ್ತೆ ಮತ್ತೆ ಕೇಳಿ ಅದರಿಂದ ತಿರುಳಿನಿಂದ ಎಷ್ಟೋ ಸಲ ರೋಮಾಂಚನಗೊಂಡಿದ್ದೆ.

ಜೀವನ ತನ್ನನ್ನು ತಾನು ತೆರೆದುಕೊಂಡಂತೆ ಸವಾಲುಗಳನ್ನು ನಿಭಾಯಿಸಲು ಅದೆಷ್ಟೋ ಸಲ ಜ್ಞಾನದ ಈ ತುಣುಕುಗಳು ನನಗೆ ಸಹಾಯ ಮಾಡಿದ್ದು ಸತ್ಯ. ಜೀವನದಲ್ಲಿ ಎಷ್ಟೋ ಸಲ ದೈಹಿಕ ಅಥವಾ ಮಾನಸಿಕವಾಗಿ ಕುಗ್ಗಿದಾಗ ಅದರಿಂದ ಹೊರಬರಲು ಮಾರ್ಗದರ್ಶನ ಮಾಡಿದ್ದು ಈ ಜ್ಞಾನದ ಸಾರ. ಇದು ನಾನು ಕಳೆದುಕೊಂಡ ಪ್ರೀತಿ ಪಾತ್ರರಿರಬಹುದು, ಸಂಬಂಧಗಳಿರಬಹುದು ಅಥವಾ ಕಷ್ಟಪಟ್ಟು ದುಡಿದ ಸಂಪತ್ತಿರಬಹುದು. ಈ ಎಲ್ಲ ಸಮಯದಲ್ಲೂ ನನಗೆ ತೆಪ್ಪದಂತೆ ನೆರವಿಗೆ ಬಂದು ತೀರ ಮುಟ್ಟಿಸಿದ್ದು ಈ ಅಗಾಧ ಜ್ಞಾನದ ತುಣುಕುಗಳು,ಇದುವರೆಗೂ ನಾನು ಕಲಿತ ಪಾಠದ ಸಾರಾಂಶ - ಹೊರಗಣ ಪ್ರಪಂಚ ನಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸುವುದರಲ್ಲೇ ಕಾಲಹರಣ ಮಾಡಿ ಅದು ದೊಡ್ಡ ಹೋರಾಟ ಮತ್ತು ಅಸಾಧ್ಯ ಆದರೆ ಅದರ ಬದಲು ನಮ್ಮ ಒಳಗಣ ಪ್ರಪಂಚವನ್ನು ಬದಲಾಯಿಸಿಕೊಂಡು ಮುಂದುವರೆಯುವುದು ಸುಲಭ!

ಈ ಪಯಣದ ಉದ್ದೇಶ ಸಣ್ಣ ಸಣ್ಣ ಪರಿಹಾರ ಹುಡುಕುವುದಲ್ಲ, ಬದಲಾಗಿ ಇದು ಒಂದು ದೀರ್ಘ ಒಳಗಣ ಮತ್ತು ಅನ್ವೇಷಣೆ. ನಿಮ್ಮಲ್ಲಿ ಎಷ್ಟೋ ಜನ ಇದೆ ತರಹದ ಆಳವಾದ ಅನುಭವದ ಅಥವಾ ಒಳಗಣ ಆಧ್ಯಾತ್ಮಿಕ ಅನ್ವೇಷಣೆಯಲ್ಲಿ ತೊಡಗಿರಬಹುದು. ಈ ಪಯಣವನ್ನು ಜೊತೆಯಾಗಿ ಮುಂದುವರೆಸೋಣ. ಜೊತೆಯಲ್ಲಿ ಬೆಳೆಯೊಣ!! ಈ ಹಾದಿಯಲ್ಲಿ ಯಾವುದೂ ಸರಿಯೆನ್ನುವುದೂ ಇಲ್ಲ, ತಪ್ಪೂ ಇಲ್ಲ. ಅನ್ವೇಷಣೆಯಲ್ಲಿ ಪ್ರತಿಯಬ್ಬರಿಗೂ ಅವರದೇ ಆದ ಆಧ್ಯತೆಗಳಿರುತ್ತವೆ , ಗುರಿಯಿರುತ್ತದೆ. ಅದನ್ನು ಗೌರವಿಸೋಣ. ಆದರೆ ತಲುಪುವ ಗಮ್ಯ ಮಾತ್ರ ಒಂದೇ ಆಗಿರುತ್ತದೆ ಅನ್ನುವುದು ನೆನಪಿನಲ್ಲಿ ಇಡೋಣ.

ಅದುವೇ - ಅಪ್ರಕಟಿತ ವಾಸ್ತವತೆ! - ಅವ್ಯಕ್ತಃ .. ..


Values

I value the process of self-discovery and personal growth through the lens of . and latest understaning of psychology. The spiritual journey is deeply personal, and my role is to offer a space where this journey can unfold. I believe in living authentically and simply, letting the ancient wisdom of our traditions guide the way forward.

Purpose

My purpose is to help individuals connect with the wisdom of our scriptures as a means of spiritual exploration. I aim to provide a space where seekers can draw from these timeless teachings to deepen their understanding of life, not to solve problems but to guide them on their spiritual journey.

Goal

My goal is to provide not answers but a space for others to reflect and grow, one step at a time.

Image by freepik

knಕನ್ನಡ
Open chat
1
Hello 👋
Can we help you?